ಜ.9-11ರವರೆಗೆ ಕಟಪಾಡಿ ದರ್ಗಾ ಉರೂಸ್

ಕಟಪಾಡಿ, ಜ.1: ಇತಿಹಾಸ ಪ್ರಸಿದ್ಧ ಕಟಪಾಡಿಯ ಜುಮ್ಮಾ ಮಸಿದಿ ಸಮೀಪ ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟಪಾಡಿ ಅಶೈಕ್ ಫಕೀರ್ ಶಾಹ್ ವಲಿಯುಲ್ಲಾ ದರ್ಗಾದ ವಾರ್ಷಿಕ ಉರೂಸ್ ಯಾನೆ ಝಿಯಾರತ್ ಕಾರ್ಯಕ್ರಮವು ಜ.9ರಿಂದ ಜ.11ರವರೆಗೆ ನಡೆಯಲಿದೆ.
ಜ.9ರರಂದು ಇಶಾ ನಮಾಝಿನ ಬಳಿಕ ಕಾರ್ಯಕ್ರಮವನ್ನು ಮಲ್ಲಾರು ಖದೀಮ್ ಜಮಾ ಮಸಿದಿ ಇಮಾಂ ಧರ್ಮಗುರು ಮೌಲಾನಾ ಮುಫ್ತಿ ಹಾಫಿಝ್ ಮಹ್ಬೂಬ್ ಅಲಿಖಾನ್ ಉದ್ಘಾಟಿಸಲಿದ್ದಾರೆ. ತೈಬಾ ಗಾರ್ಡನ್ ಬಂಗ್ಲಗುಡ್ಡೆಯ ಉಸ್ತಾದ್ ಶರೀಫ್ ಸಅದಿ ಕಿಲ್ಲೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಜ.10ರಂದು ಮಗ್ರಿಬ್ ನಮಾಝಿನ ಬಳಿಕ ಸಂದಲ್ ಮೆರವಣಿಗೆ ಜರಗಲಿದೆ. ಇಶಾ ನಮಾಝಿನ ಬಳಿಕ ಜಲಾಲಿಯ್ಯ ಮಜ್ಲಿಸ್, ಬುರ್ದಾ ಆಲಾಪನೆ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಇದರ ನೇತೃತ್ವವನ್ನು ಅಸ್ಸಯ್ಯದ್ ಕೆ.ಎಸ್. ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ವಸಲಿದ್ದಾರೆ. ಜ.11ರಂದು ಬೆಳಿಗ್ಗೆ ಮೌಲೂದ್ ಪಾರಾಯಣ ನಡೆಯ ಲಿದ್ದು, ನಂತರ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





