Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಮುಝಫರ್ ಅಸ್ಸಾದಿಯವರ ಬದುಕು, ಬರವಣಿಗೆಗಳ...

ಮುಝಫರ್ ಅಸ್ಸಾದಿಯವರ ಬದುಕು, ಬರವಣಿಗೆಗಳ ಸಮಗ್ರ ಚಿಂತನೆ ಅಗತ್ಯ: ದಿನೇಶ್ ಅಮಿನ್ ಮಟ್ಟು

ಅಗಲಿದ ಮುಝಫರ್ ಅಸ್ಸಾದಿಗೆ ಸಂತಾಪ ಸೂಚಕ ಸಭೆ

ವಾರ್ತಾಭಾರತಿವಾರ್ತಾಭಾರತಿ25 Jan 2025 1:56 PM IST
share
ಮುಝಫರ್ ಅಸ್ಸಾದಿಯವರ ಬದುಕು, ಬರವಣಿಗೆಗಳ ಸಮಗ್ರ ಚಿಂತನೆ ಅಗತ್ಯ: ದಿನೇಶ್ ಅಮಿನ್ ಮಟ್ಟು

ಉಡುಪಿ, ಜ.25: ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಮುಝಫರ್ ಅಸ್ಸಾದಿಯವರು ಲಿಂಗಾಯತ ಪ್ರತ್ಯೇಕ ಧರ್ಮ, ಆದಿವಾಸಿಗಳು, ರೈತ ಚಳವಳಿ ಬಗ್ಗೆ ಅಧ್ಯಯನ ಮಾಡಿದ್ದರು. ಅವರ ಎಲ್ಲ ಪುಸ್ತಕಗಳು, ಬದುಕು ಹಾಗೂ ಬರವಣಿಗೆಗಳ ಬಗ್ಗೆ ಸಮಗ್ರ ರೂಪದ ಚಿಂತನೆ, ಚರ್ಚೆ ಹಾಗೂ ಅಧ್ಯಯನ ಆಗಬೇಕಿದೆ. ಅವರ ಬಗ್ಗೆ ಅವರ ವಿದ್ಯಾರ್ಥಿಗಳು, ಸಹಪಾಠಿಗಳು ಬರೆದಿರುವ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಕೆಲಸ ಮಾಡಬೇಕಾಗಿದೆ. ಆ ಮೂಲಕ ಅಸ್ಸಾದಿ ನೆನಪು ಶಾಶ್ವತವಾಗಿ ಇಟ್ಟುಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ.

ಸಾಹೇಬಾನ್ ಸಮುದಾಯ ವೇದಿಕೆ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಇತ್ತೀಚಿಗೆ ಅಗಲಿದ ಉಡುಪಿ ಜಿಲ್ಲೆಯ ಶಿರ್ವ ಮೂಲದ ಖ್ಯಾತ ರಾಜ್ಯಶಾಸ್ತ್ರ ಪ್ರಾಧ್ಯಾಪಕ, ಹಿರಿಯ ಚಿಂತಕ ಮುಝಫರ್ ಅಸ್ಸಾದಿಯವರಿಗೆ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಬಹಳ ಮಂದಿ ಪ್ರಾಧ್ಯಾಪಕರು ಕೇವಲ ತರಗತಿಯಲ್ಲಿನ ಪಾಠಕ್ಕೆ ಮಾತ್ರ ಸೀಮಿತರಾದರೆ, ಕೆಲವರು ಪಾಠದ ಜೊತೆ ಸಂಶೋಧನೆ ಮಾಡಿ ಸಮಾಜದ ಬಗ್ಗೆ ಚಿಂತನೆ ಮಾಡುವವರಾಗಿದ್ದಾರೆ. ಇನ್ನು ಕೆಲವರು ಇದರೆಲ್ಲದ ಜೊತೆಗೆ ಬೀದಿಯಲ್ಲಿ ನಿಂತು ಹೋರಾಟ ಮಾಡುವವರಾಗಿದ್ದಾರೆ. ಈ ಕೊನೆಯ ವರ್ಗಕ್ಕೆ ಮುಝಫರ್ ಅಸ್ಸಾದಿ ಸೇರಿದವರಾಗಿದ್ದಾರೆ ಎಂದರು.

ಅಂತಾರಾಷ್ಟ್ರೀಯ ಮಟ್ಟದ ವಿವಿಗಳ ವಿಚಾರ ಸಂಕಿಣದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸುವ ಇವರು, ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಬೀದಿಯಲ್ಲಿ ನಿಂತು ಹೋರಾಟ ಕೂಡ ಮಾಡುತ್ತಿದ್ದರು. ಅವರು ದಂತ ಗೋಪುರದಲ್ಲಿ ಕುಳಿತ ಪ್ರಾಧ್ಯಾಪಕರಲ್ಲ. ಈ ಸಮಾಜಕ್ಕೆ ಒಳಿತು ಮಾಡಬೇಕೆಂಬ ಕಾಳಜಿ ಅವರಿಗೆ ಇತ್ತು. ಪ್ರತಿಕ್ಷಣವೂ ಇವರು ಈ ಸಮಾಜದ ಬಗ್ಗೆ ಚಿಂತನೆ ಮಾಡುತ್ತಿದ್ದರು. ಬುದ್ಧಿವಂತರಾಗಿ ಒಳ್ಳೆಯವರಾಗಿದ್ದ ಅಪರೂಪದ ವ್ಯಕ್ತಿತ್ವ ಇವರದ್ದು ಎಂದು ಅವರು ಹೇಳಿದರು.

ಅಸ್ಸಾದಿ ಜ್ಞಾನವನ್ನು ಹಂಚುತ್ತಿದ್ದರು

ಜ್ಞಾನವನ್ನು ಬಚ್ಚಿಡುವುದು ಈ ದೇಶದ ಸಂಸ್ಕೃತಿಯಾಗಿತ್ತು. ಎಲ್ಲರಿಗೂ ಜ್ಞಾನ ಸಿಗಬಾರದು ಎಂಬ ಭಾವನೆ ಇತ್ತು. ಈ ದೇಶದ ಹಿಂದುಳಿದ ವರ್ಗದ ಜನರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿತರನ್ನಾಗಿ ಮಾಡುವ ಸಂಸ್ಕೃತಿಯಾಗಿತ್ತು. ಆದರೆ ಅಸ್ಸಾದಿ ತಮ್ಮಲ್ಲಿನ ಜ್ಞಾನವನ್ನು ಎಲ್ಲರಿಗೂ ಹಂಚುತ್ತಿದ್ದರು ಎಂದ ಅವರು, ಅಸ್ಸಾದಿ ಕೇವಲ ಮುಸ್ಲಿಮರ ಬಗ್ಗೆ ಮಾತ್ರವಲ್ಲದೆ ಒಟ್ಟು ಸಮಾಜದ ಬಗ್ಗೆ ಚಿಂತನೆ ಮಾಡುತ್ತಿದ್ದರು. ಸಮಾಜದಲ್ಲಿ ಅವಕಾಶ ಹಾಗೂ ಪ್ರಾತಿನಿಧ್ಯಗಳಿಂದ ವಂಚಿತರಾದವರ ಪರವಾಗಿ ಅವರು ತಮ್ಮ ಬದುಕಿನುದ್ದಕ್ಕೂ ಕೆಲಸ ಮಾಡಿದರು ಎಂದರು.

ಅವರ ಅಗಲಿಕೆ ಬಳಿಕ ಅವರು ಉಪಕುಲಪತಿ ಆಗಬೇಕಿತ್ತು ಎಂಬ ಚರ್ಚೆ ಬಹಳ ಕಡೆ ನಡೆಯುತ್ತಿದೆ. ಅವರು ಆ ಹುದ್ದೆಗೆ ಅರ್ಹರು ಎಂಬುದು ಎಲ್ಲರಿಗೂ ಗೊತ್ತಿತ್ತು. ಅವರು ಆ ಹುದ್ದೆಗೆ ಆಕಾಂಕ್ಷಿಯಲ್ಲದಿದ್ದರೂ ಈ ವಿಚಾರವನ್ನು ಎಲ್ಲರೂ ಹೇಳುವಾಗ ಅವರಿಗೆ ನೋವು ಕಾಡುತಿತ್ತು. ರಾಜ್ಯಪಾಲರ ಬಳಿ ಇವರು ಹೆಸರು ಹೋದಾಗ ಒತ್ತಡದಿಂದ ಹೆಸರು ಕೈಬಿಡಲಾಗುತ್ತಿತ್ತು. ಇಂತಹ ವಾತಾವರಣವನ್ನು ಬದಲಾವಣೆ ಮಾಡಲು ಪ್ರಯತ್ನ ಪಡುತ್ತಿದ್ದರೋ ಅಂತಹದ್ದೇ ವಾತಾವರಣಕ್ಕೆ ಅಸ್ಸಾದಿ ಬಲಿಯಾದರು ಎಂದು ಅಮಿನ್ ಮಟ್ಟು ಖೇದ ವ್ಯಕ್ತಪಡಿಸಿದರು.

ಮುಸ್ಲಿಮ್ ಮೀಸಲಾತಿಗೆ ಸಂಬಂಧಿಸಿ ಅಸ್ಸಾದಿ ಸಾಕಷ್ಟು ಅಧ್ಯಯನಗಳು ಮಾಡಿ ವರದಿ ತಯಾರಿಸಿದ್ದರು. ಸರಕಾರ ಮಾಡಬೇಕಾದ ಕೆಲಸವನ್ನು ಅಸ್ಸಾದಿ ಮಾಡಿದ್ದರು. ಮುಸ್ಲಿಮರಿಗೆ ಮೀಸಲಾತಿ ಯಾಕೆ ಬೇಕು ಎಂದು ಯಾರಾದರೂ ಕೇಳಿದರೆ, ಅಸ್ಸಾದಿಯವರ ಪುಸ್ತಕ ಮುಂದಿರಿಸಿದರೆ ಸಾಕಾಗುತ್ತದೆ. ಆ ರೀತಿಯ ಅಧ್ಯಯನ ಅದರಲ್ಲಿದೆ. ಇಡೀ ದೇಶದಲ್ಲಿ ಯಾರು ಮಾಡದ ಈ ಕೆಲಸವನ್ನು ಅಸ್ಸಾದಿ ಮಾಡಿದರು. ಆದರೆ ಇದೀಗ ಅವರ ಅಗಲಿಕೆ ನಮಗೆ ದೊಡ್ಡ ನಷ್ಟವಾಗಿದೆ. ಇನ್ನು ಆ ಖಾಲಿ ಸ್ಥಾನವನ್ನು ತುಂಬುದು ಬಹಳ ಕಷ್ಟ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಜಫ್ರುಲ್ಲಾ, ನಮ್ಮ ನಾಡ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಉದ್ಯಮಿ ಶಬ್ಬೀರ್ ಅಹ್ಮದ್ ಉಪಸ್ಥಿತರಿದ್ದರು.

ಮುಝಫರ್ ಅಸ್ಸಾದಿ ಸಂಬಂಧಿಕರಾದ ಇಮಾದ್ ಅಸ್ಸಾದಿ, ರಿಯಾಝ್ ಅಹ್ಮದ್ ಹಾಗೂ ಕಾಲೇಜು ಸಹಪಾಠಿ ರೆ.ಫ್ರಾನ್ಸಿಸ್ ಕೋಟಿಯಾನ್ ಮಾತನಾಡಿದರು. ಸಾಹೇಬಾನ್ ಸಮುದಾಯ ವೇದಿಕೆಯ ಅಧ್ಯಕ್ಷ ಅಫ್ರೋಝ್ ಅಸ್ಸಾದಿ ಸ್ವಾಗತಿಸಿದರು. ಕಾರ್ಯದರ್ಶಿ ಇಕ್ಬಾಲ್ ಮನ್ನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

‘ಕೋಮುವಾದ, ಬಂಡವಾಳವಾದ ಬಲಿಪಶುಗಳು ಒಂದೇ’

ಕೋಮುವಾದ ಮತ್ತು ಬಂಡವಾಳವಾದದ ಪದರಗಳನ್ನು ಬಿಡಿಸಿ ಮನವರಿಕೆ ಮಾಡಿದಾಗ ಮಾತ್ರ ಅದರಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಸ್ಸಾದಿ ಆ ಕೆಲಸ ಮಾಡುತ್ತಿದ್ದರು. ಕೋಮುವಾದ ಮತ್ತು ಬಂಡವಾಳವಾದವನ್ನು ಯಾವ ನೋಟದಲ್ಲಿ ನೋಡಬೇಕು, ಇಲ್ಲಿಯ ಶೋಷಣೆ, ಅನ್ಯಾಯ, ಜಾತೀಯತೆ ಸಹಿತ ಎಲ್ಲ ಸಮಸ್ಯೆಗಳನ್ನು ಹೇಗೆ ಗ್ರಹಿಸಬೇಕು ಮತ್ತು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದನ್ನು ಅಸ್ಸಾದಿ ಹೇಳಿಕೊಡುತ್ತಿದ್ದರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದು ಅವರ ಪ್ರತಿಪಾದನೆ ಆಗಿತ್ತು ಎಂದು ದಿನೇಶ್ ಅಮಿನ್ ಮಟ್ಟು ಹೇಳಿದರು.

ಬಂಡವಾಳವಾದ ಮತ್ತು ಕೋಮವಾದಕ್ಕೂ ಪರಸ್ಪರ ಸಂಬಂಧ ಇದೆ ಎಂಬುದನ್ನು ಅವರು ವಿವರಿಸುತ್ತಿದ್ದರು. 1991ರ ಹೊಸ ಆರ್ಥಿಕ ನೀತಿ ಹಾಗೂ 1992 ಬಾಬರಿ ಮಸೀದಿ ಧ್ವಂಸದಂತಹ ವಿದ್ಯಮಾನದ ಬಳಿಕ ಭಾರತ ಹೇಗೆ ಬದಲಾಗಿದೆ ಎಂಬುದು ಎಲ್ಲರಿಗೂ ಗೊತ್ತಿಗೆ. ಕೋಮುವಾದ ಮತ್ತು ಬಂಡಾವಳವಾದ ಈ ಎರಡರ ಬಲಿಪಶು ಹಾಗೂ ಫಲಾನುಭವಿಗಳು ಒಂದೇ ಆಗಿದ್ದಾರೆ. ಇದಕ್ಕೆ ದಲಿತರು ಹಿಂದುಳಿದವರ್ಗದವರು, ಅಲ್ಪಸಂಖ್ಯಾತರು ಬಲಿಯಾದರೆ, ಮೇಲ್ವರ್ಗ, ಮೇಲ್ಜಾತಿಯವರು ಲಾಭ ಪಡೆದುಕೊಂಡರು. ಇದನ್ನು ಅರ್ಥ ಮಾಡಿಕೊಳ್ಳಲು ಅಸ್ಸಾದಿಯಂತಹ ವಿದ್ವಾಂಸರ ಅಗತ್ಯ ನಮಗೆ ಇತ್ತು ಎಂದು ಅವರು ಅಭಿಪ್ರಾಯಪಟ್ಟರು.

‘ಮುಝಫರ್ ಅಸ್ಸಾದಿಯವರಿಗೆ ಸಂತಾಪ ಸೂಚಕ ಕಾರ್ಯಕ್ರಮವನ್ನು ಅಫ್ರೋಝ್ ಅಸ್ಸಾದಿ ದೂರದ ಇಂಗ್ಲೆಂಡಿನಿಂದ ಬಹಳ ಆಸಕ್ತಿಯಿಂದ ಬಂದು ಎಲ್ಲರನ್ನು ಸೇರಿಸಿ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ಇವರು ಮುಂದೆ ಮುಝಫರ್ ಅಸ್ಸಾದಿ ಕುರಿತ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯಕ್ಕೆ ಮುಂದಾಗಬೇಕು’

-ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತರು

ಭಾವುಕರಾದ ಕಾಲೇಜು ಸಹಪಾಠಿ ಫ್ರಾನ್ಸಿಸ್!

‘ನಾನು ಮತ್ತು ಅಸ್ಸಾದಿ ಪಿಯುಸಿಯಿಂದ ಪದವಿಯವರೆಗೂ ಒಟ್ಟಿಗೆ ಕಲಿತಿದ್ದೆವು. ನಾನು ಅವರ ಮನೆಯಲ್ಲಿ ಇದ್ದೆ ವಿದ್ಯಾಭ್ಯಾಸ ಮಾಡಿದ್ದೆ. ಅವರ ಮನೆಯಿಂದ ನನಗೆ ತುಂಬಾ ಸಹಕಾರ ಸಿಕ್ಕಿತ್ತು. ಅವರು ನಮ್ಮನ್ನು ಅಗಲಿರುವುದು ತುಂಬಾ ನೋವು ತರುತ್ತದೆ ಎಂದು ಕಾಲೇಜು ಸಹಪಾಠಿ ರೆ.ಫ್ರಾನ್ಸಿಸ್ ಕೋಟಿಯಾನ್ ಭಾವುಕರಾಗಿ ಕಣ್ಣೀರಿಟ್ಟರು.

ಅವರಲ್ಲಿ ಸಮಾಜಮುಖಿ ಚಿಂತನೆ ಇತ್ತು. ಎಲ್ಲ ಧರ್ಮದವರಿಗೆ ಒಳಿತು ಆಗಬೇಕೆಂಬ ಉದ್ದೇಶ ಅವರಲ್ಲಿತ್ತು. ಆದರೆ ಅವರಿಗೆ ರಾಜಕೀಯ ಒತ್ತಡದಿಂದ ಉಪಕುಲಪತಿ ಹುದ್ದೆ ಕೈತಪ್ಪಿ ಹೋಯಿತು ಎಂಬುದು ಬೇಸರ. ಅವರ ನೆನಪು ಸದಾ ನಮ್ಮಲ್ಲಿ ಇದೆ ಎಂದು ಫ್ರಾನ್ಸಿಸ್ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X