ಗೆಳೆಯನೊಂದಿಗೆ ತೆರಳಿದ್ದ ಯುವಕ ನಾಪತ್ತೆ

ಕಾಪು: ಗೆಳೆಯನೊಂದಿಗೆ ಮಂಗಳೂರಿಗೆ ಕಾರಿನಲ್ಲಿ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಮಲ್ಲಾರು ಗ್ರಾಮದ ನಿವಾಸಿ ಮಣಿಕಂಠ(36) ಎಂಬವರು ಜಾಕೀರ್ ಎಂಬಾತನೊಂದಿಗೆ ಬಾಡಿಗೆ ವಿಚಾರವಾಗಿ ಮಂಗಳೂರಿಗೆ ಫೆ.24ರಂದು ರಾತ್ರಿ ವೇಳೆ ಕಾರಿನಲ್ಲಿ ಹೋಗಿದ್ದರು. ಮರುದಿನ ಮಣಿಕಂಠ ಅವರಿಗೆ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಮಣಿಕಂಠ ಪತ್ನಿ ಜಾಕೀರ್ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದಾಗ ಜಾಕೀರ್ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ನಂತರ ಉಚ್ಚಿಲ, ಪಡುಬಿದ್ರಿ ಕಡೆಗಳಲ್ಲಿ ಮಣಿಕಂಠ ಹಾಗೂ ಕಾರನ್ನು ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




