23 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಆರೋಪಿ ಬಂಧನ

ಗಂಗೊಳ್ಳಿ, ಆ.25: ವರದಕ್ಷಿಣೆ ಕಾಯ್ದೆ ಪ್ರಕರಣದಲ್ಲಿ ಕಳೆದ 23 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಪ್ರಸ್ತುತ ಶಿವಮೊಗ್ಗ ಹೊಸನಗರದ ಸಂಪಿಗೆ ನಿವಾಸಿ ನಾಸೀರ ಖಾನ್ (52) ಬಂಧಿತ ಆರೋಪಿ. ಈತನ ಮೇಲೆ ವರದಕ್ಷಿಣೆ ಕಿರುಕುಳದಡಿ 2002ರಲ್ಲಿ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಇತ್ತೀಚೆಗೆ ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಕೃಷ್ಣ, ಪ್ರಸನ್ನ, ಸಂದೀಪ್ ಕುರಾಣಿ, ಮಹಾಲಿಂಗರಾಯ ಸಾಗರ ತಾಲೂಕಿನ ಆನಂದಪುರದಲ್ಲಿ ಬಂಧಿಸಿದ್ದು ಆರೋಪಿಯನ್ನು ಕುಂದಾಪುರ ನ್ಯಾಯಾ ಲಯಕ್ಕೆ ಹಾಜರುಪಡಿಸಿಲಾಗಿದೆ.
Next Story





