Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕರಾವಳಿಯ 6 ಪುರಾತತ್ವ ನಿವೇಶನಗಳನ್ನು...

ಕರಾವಳಿಯ 6 ಪುರಾತತ್ವ ನಿವೇಶನಗಳನ್ನು ಅಧಿಸೂಚಿತ ನಿವೇಶನಗಳೆಂದು ಘೋಷಿಸಲು ಅದಿಮ ಕಲಾ ಟ್ರಸ್ಟ್ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ10 Nov 2025 9:16 PM IST
share
ಕರಾವಳಿಯ 6 ಪುರಾತತ್ವ ನಿವೇಶನಗಳನ್ನು ಅಧಿಸೂಚಿತ ನಿವೇಶನಗಳೆಂದು ಘೋಷಿಸಲು ಅದಿಮ ಕಲಾ ಟ್ರಸ್ಟ್ ಆಗ್ರಹ

ಉಡುಪಿ, ನ.10: ಉಡುಪಿ ಜಿಲ್ಲೆಯಲ್ಲಿರುವ ನಾಲ್ಕು ಹಾಗೂ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ತಲಾ ಒಂದು ಪುರಾತತ್ವದ ಅಧ್ಯಯನದ ದೃಷ್ಟಿಯಿಂದ ಭಾರೀ ಮಹತ್ವವನ್ನು ಹೊಂದಿರುವ ಪುರಾತತ್ವ ನಿವೇಶನಗಳನ್ನು ಅಧಿಸೂಚಿತ ನಿವೇಶನಗಳೆಂದು ಘೋಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕರಾವಳಿಯಲ್ಲಿ ಪುರಾತತ್ವ ಸಂಶೋಧನೆ, ಅನ್ವೇಷಣೆ, ಸಂರಕ್ಷಣೆ ಹಾಗೂ ಮಾಹಿತಿ ಮತ್ತು ತರಬೇತಿ ನೀಡುವ ರಾಷ್ಟ್ರೀಯ ಸಂಘಟನೆ ಉಡುಪಿಯ ಅದಿಮ ಕಲಾ ಟ್ರಸ್ಟ್ ಮೈಸೂರಿನ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಆಯುಕ್ತರಿಗೆ ಮನವಿ ಅರ್ಪಿಸಿ ಆಗ್ರಹಿಸಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿರುವ ಈ ಏಳು ನಿವೇಶನಗಳು ಪುರಾತತ್ವ, ಇತಿಹಾಸದ ಅಧ್ಯಯನಕ್ಕೆ ಉತ್ತಮ ತಾಣಗಳಾಗಿದ್ದು, ಚಾರಿತ್ರಿಕವಾಗಿ ರಾಷ್ಟ್ರೀಯ ಮಹತ್ವವನ್ನು ಹೊಂದಿರುವ ನಿವೇಶನಗಳಾಗಿವೆ. ಇವುಗಳ ಸಂರಕ್ಷಣೆಗೆ ತುರ್ತು ಗಮನ ಹರಿಸಬೇಕಾದ ಹಿನ್ನೆಲೆಯಲ್ಲಿ ಇವುಗಳನ್ನು ಅಧಿಸೂಚಿತ ನಿವೇಶನಗಳಾಗಿ ಘೋಷಿಸುವ ಅಗತ್ಯವಿದೆ ಎಂದು ಅದಿಮ ಕಲಾ ಟ್ರಸ್ಟ್‌ನ ಸ್ಥಾಪಕ ಸಂಚಾಲಕರಾಗಿರುವ, ಶಿರ್ವ ಕಾಲೇಜಿನ ನಿವೃತ್ತ ಇತಿಹಾಸ ಪ್ರಾದ್ಯಾಪಕ ಹಾಗೂ ಪುರಾತತ್ವ ಸಂಶೋಧಕ ಪ್ರೊ.ಟಿ.ಮುರುಗೇಶಿ ಸಂಸ್ಥೆಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಪ್ರೊ.ಮುರುಗೇಶಿ ಅವರು ಹೆಸರಿಸಿರುವ ಪುರಾತತ್ವ ಮಹತ್ವ ಹೊಂದಿದ ಆರು ನಿವೇಶನಗಳ ಸಂಕ್ಷಿಪ್ತ ಮಾಹಿತಿ :

ಅವಲಕ್ಕಿಪಾರೆ :

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಇಡೂರು- ಕುಂಜ್ಞಾಡಿ ಗ್ರಾಮದ ಕೊಲ್ಲೂರು ವನ್ಯಜೀವಿ ಸಂರಕ್ಷಿತ ಅಭಯಾರಣ್ಯದಲ್ಲಿರುವ ಒಂದು ಪ್ರಮುಖ ಆದಿಮ ಕಲಾ (ರಾಕ್ ಆರ್ಟ್) ನಿವೇಶನವಾಗಿದೆ. ಈ ನಿವೇಶನವನ್ನು ತಾನು ಸಂಶೋಧಿಸಿ ವಿವರಗಳನ್ನು ಪ್ರಕಟಿಸಿದ್ದು, 2022ರ ಡಿ.26 ಮತ್ತು 27ರಂದು ಇದೇ ನಿವೇಶನದಲ್ಲಿ ಅಂತರರಾಷ್ಟ್ರೀಯ ರಾಕ್ ಆರ್ಟ್ ಫೆಸ್ಟನ್ನು ನಡೆಸಿದ್ದಾಗಿ ಪ್ರೊ.ಮುರುಗೇಶಿ ತಿಳಿಸಿದ್ದಾರೆ.

ಈ ನಿವೇಶನ ಕೊಲ್ಲೂರಿಗೆ ಹೋಗುವ ಮುಖ್ಯರಸ್ತೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿದೆ. ಇಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಮಾನವರ, ಪ್ರಾಣಿಗಳ ಮತ್ತು ರೇಖಾಕೃತಿಗಳ ಚಿತ್ರಗಳು ಸುಮಾರು ಅರ್ಧ ಎಕರೆ ಭೂ ಪ್ರದೇಶದಲ್ಲಿರುವ ಬಂಡೆಗಳ ಮೇಲೆ ಹರಡಿಕೊಂಡಿವೆ. ಈ ಚಿತ್ರಗಳ ಕಾಲಮಾನದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಕರಾವಳಿಯ ಅತ್ಯಂತ ಪ್ರಮುಖ ಆದಿಮ ಕಲಾ ನಿವೇಶನವೆಂದು ಬಹುತೇಕ ಎಲ್ಲಾ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ನಿವೇಶನವನ್ನು ಅಧಿಸೂಚಿತ ಪುರಾತತ್ವ ನಿವೇಶನವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಬುದ್ಧನಜೆಡ್ಡು :

ಜಿಲ್ಲೆಯ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಕೊಲ್ಲೂರು ರಕ್ಷಿತಾರಣ್ಯದ ನಡುವೆ ಇರುವ ಒಂದು ಆದಿಮ ಕಲಾ ನಿವೇಶನ. ಈ ನಿವೇಶನವನ್ನು ಸಹ ತಾನು 2009ರಲ್ಲಿ ಸಂಶೋಧಿಸಿದ್ದಾಗಿ ಹೇಳಿರುವ ಪ್ರೊ.ಮುರುಗೇಶಿ, 2010ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ ರಾಕ್ ಆರ್ಟ್ ಸೊಸೈಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ. ಅ. ಸುಂದರ ಮತ್ತು ತಾನು ಜಂಟಿಯಾಗಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾಗಿ ತಿಳಿಸಿದ್ದಾರೆ.

ಬುದ್ಧನಜೆಡ್ಡು ಭೀಮನಪಾರೆ ಎಂಬ ಸ್ಥಳದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ 40ಕ್ಕಿಂತಲೂ ಹೆಚ್ಚು ಮಾನವ, ಪ್ರಾಣಿ-ಪಕ್ಷಿ, ಮತ್ತು ಜ್ಯಾಮಿತಿಯ ರೇಖಾಕೃತಿಯ ಚಿತ್ರಗಳಿವೆ. ಕರಾವಳಿಯ ಅತ್ಯಂತ ಪ್ರಮುಖ ಆದಿಮ ಕಲಾ ನಿವೇಶನವೆಂದು ಬಹುತೇಕ ಎಲ್ಲಾ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ.

ಗಾವಳಿ :

ಕುಂದಾಪುರ ತಾಲೂಕಿನ ಗಾವಳಿಯಲ್ಲಿ ನೈಸರ್ಗಿಕ ಬಂಡೆಗಳ ಮೇಲೆ ಕಲಾ ಚಿತ್ರಗಳನ್ನು ಇತಿಹಾಸಜ್ಞ ದಿ.ಡಾ.ಬಿ.ವಸಂತ ಶೆಟ್ಟಿ ಅವರು ಇದನ್ನು 1982ರಲ್ಲಿ ಸಂಶೋಧಿಸಿ ಪ್ರಕಟಿಸಿದ್ದಾರೆ. ಈ ನಿವೇಶನದಲ್ಲಿ ಪ್ರಧಾನವಾಗಿ ಗೂಳಿಯ ಚಿತ್ರಗಳು ಕಂಡುಬಂದಿವೆ. 2010ರಲ್ಲಿ ತಾನು ಅದೇ ನಿವೇಶನದಲ್ಲಿ ನೂತನ ಶಿಲಾಯುಗದ ಕಲ್ಲಿನಾಯುಧಗಳನ್ನು ಶೋಧಿಸಿ ಪ್ರಕಟಿಸಿದ್ದಾಗಿ ಹೇಳಿರುವ ಅವರು, ಕರಾವಳಿಯ ಅತ್ಯಂತ ಪ್ರಮುಖ ಆದಿಮ ಕಲಾ ನಿವೇಶನವೆಂದು ನಾಡಿನಎಲ್ಲಾ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ನಿವೇಶನವನ್ನು ಸಹ ಅಧಿಸೂಚಿತ ಪುರಾತತ್ವ ನಿವೇಶನವೆಂದು ಘೋಷಿಸಬೇಕೆಂದು ಅದಿಮ ಕಲಾ ಟ್ರಸ್ಟ್ ಮೂಲಕ ಮನವಿ ಮಾಡಿದ್ದಾರೆ.

ಬರದಕಲ್ಲು ಬೋಳೆ :

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕರೂರು ಸಮೀಪದ ರಕ್ಷಿತಾರಣ್ಯದಲ್ಲಿ ಜಗದೀಶ್ ಅಸೋಡೆ ಮತ್ತು ಮಾಧುರಿ ಚೌಗಳೆಯವರು 2024ರ ಎಪ್ರಿಲ್‌ನಲ್ಲಿ ಈ ನಿವೇಶನವನ್ನು ಸಂಶೋಧಿಸಿ ಪ್ರಕಟಿಸಿದ್ದಾರೆ. ಈ ನಿವೇಶನದಲ್ಲಿಯೂ ಸಹ ಮಾನವರ, ಪ್ರಾಣಿಗಳ ಹಾಗೂ ರೇಖಾಕೃತಿಗಳ ಚಿತ್ರಗಳು ಕಂಡುಬಂದಿವೆ. ಕರಾವಳಿಯ ಅತ್ಯಂತ ಪ್ರಮುಖ ಆದಿಮ ಕಲಾ ನಿವೇಶನವೆಂದು ಬಹುತೇಕ ಎಲ್ಲಾ ವಿದ್ವಾಂಸರೂ ಒಪ್ಪಿಕೊಂಡಿದ್ದಾರೆ.

ಮದ್ಮಲ್‌ಪಾದೆ :

ಕಾರ್ಕಳ ತಾಲೂಕಿನ ಪಳ್ಳಿಯ ಮದ್ಮಲ್‌ಪಾದೆ ಎಂದು ಕರೆಯಲ್ಪಡುವ ಒಂದು ಕಲ್ಲು ಬೆಟ್ಟದ ಮೇಲೆ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿ (ಡೊಲ್ಮನ್) ನಿವೇಶನವನ್ನು 2013ರಲ್ಲಿ ನಾನು ಸಂಶೋಧಿಸಿ ಪ್ರಕಟಿಸಿದ್ದೇನೆ. ಇಲ್ಲಿ ಸಾಧಾರಣ ಸುಸ್ಥಿತಿಯಲ್ಲಿ ಇರುವ ಒಂದು ಕಲ್ಮನೆ ಸಮಾಧಿಯಿದೆ. ಈ ನಿವೇಶನ ಆಕ್ರಮ ಕಲ್ಲು ಗಣಿಗಾರಿಕೆಯಿಂದ ತೀರಾ ಅಪಾಯದಲ್ಲಿದೆ. ಕರಾವಳಿಯ ಅತ್ಯಂತ ಮಹತ್ವದ ಈ ಬೃಹತ್ ಶಿಲಾಯುಗದ ನಿವೇಶನದ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಮೂಡುಕೋಣಾಜೆ :

ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದರೆ ತಾಲೂಕಿನ ಮೂಡುಕೋಣಾಜೆಯ ಮೋರಿಯರ ಬೆಟ್ಟದಲ್ಲಿರುವ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿ ನಿವೇಶನವನ್ನು 1970ರಲ್ಲಿ ದಿ. ಡಾ. ಪಾದೂರು ಗುರುರಾಜ ಭಟ್ಟರು ಸಂಶೋಧಿಸಿ ಪ್ರಕಟಿಸಿದ್ದಾರೆ. ಈ ನಿವೇಶನದಲ್ಲಿ ಎರಡು ಕಲ್ಮನೆ ಸಮಾಧಿಗಳು ಇವೆ. ಇದೇ ನಿವೇಶನದಲ್ಲಿ ತೀರಾ ಇತ್ತೀಚಿಗೆ ಸುಟ್ಟ ಆವಿಗೆ ಮಣ್ಣಿನ ಗೊಂಬೆಗಳು ಹಾಗೂ ಇತರೆ ಪ್ರಾಚ್ಯಾವಶೇಷಗಳನ್ನು ನಾನು ಸಂಶೋಧಿಸಿದ್ದೇನೆ.

ಕರಾವಳಿಯ ಈ ಎಲ್ಲಾ ಅತ್ಯಂತ ಮಹತ್ವದ ಶಿಲಾಯುಗದ ನಿವೇಶನಗಳನ್ನು ಅಧಿಸೂಚಿತ ಪುರಾತತ್ವ ನಿವೇಶನವೆಂದು ಘೋಷಿಸಲು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದಿಮ ಕಲಾ ಟ್ರಸ್ಟ್ ಪರವಾಗಿ ಪ್ರೊ.ಮುರುಗೇಶಿ ಮೈಸೂರಿನ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಆಯುಕ್ತರನ್ನು ಆಗ್ರಹಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X