ಮೂಡ್ಲಕಟ್ಟೆ ಎಂಐಟಿಯಲ್ಲಿ ಎಐ, ಡ್ರೋನ್, ರೋಬೊಟೆಕ್ಸ್ ಸ್ಮಾರ್ಟ್ ಕೇಂದ್ರ ಉದ್ಘಾಟನೆ

ಕುಂದಾಪುರ, ಫೆ.14: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಸ್ಥೆಯ ಸಂಶೋಧನಾ ವಿಭಾಗದ ಅಡಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ), ಡ್ರೋನ್ ಹಾಗೂ ರೋಬೋಟಿಕ್ಸ್ ಸ್ಮಾರ್ಟ್ ಇನೋವೇಶನ್ ಕೇಂದ್ರವನ್ನು ಜಪಾನಿನ ಕೆಟಿಸಿ ಹೋಲ್ಡಿಂಗ್‌ನ ಏಷ್ಯಾ ಬ್ಯುಸಿನೆಸ್ ಹೆಡ್ ತಾಕೇಶಿ ಒಗುರಾ ಉದ್ಘಾಟಿಸಿದರು.
ಕೇಂದ್ರವನ್ನು ಸಂಸ್ಥೆಯ ಸಂಶೋಧನೆ ಹಾಗೂ ಸಲಹಾ ವಿಭಾಗದ ಡೀನ್ ಡಾ. ಇಂದ್ರ ವಿಜಯ್ ಸಿಂಗ್ ಮುನ್ನಡೆಸಲಿ ದ್ದಾರೆ. ಇಲ್ಲಿ ಉದಯೋನ್ಮುಖ ಸಂಶೋಧಕರಿಗೆ ತಂತ್ರಜ್ಞಾನಗಳಲ್ಲಿ ಉನ್ನತ ಸಂಶೋಧನೆ, ನವೀನತೆ ಹಾಗೂ ಕೈಗಾರಿಕಾ ಸಹಕಾರವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಅತಿಥಿಯಾಗಿ ಭಾಗವಹಿಸಿದ್ದ ಟೆಟಿಸಿಎಚ್‌ನ ಸಹಸಂಸ್ಥಾಪಕ ಹಾಗೂ ಸಿಇಒ ಅನಿಲ್ ಬಸೋತ್ರ ವಿದ್ಯಾರ್ಥಿಗಳಿಗೆ ಜಾಗತಿಕ ಪರಿಚಯ ಮತ್ತು ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಬಗ್ಗೆ ಮಾತನಾಡಿದರು. ವಿಷನ್ ಡಿಜಿಟಲ್ ಇಂಡಿಯಾದ ಅಧ್ಯಕ್ಷ ಡಾ.ಹರಿಕೃಷ್ಣ ಮರಂ ಮಾತನಾಡಿ, ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಹೊಂದಿಕೊಳ್ಳು ವಂತೆ ತಿಳಿಸಿದಲ್ಲದೇ, ಕೃತಕ ಬುದ್ಧಿಮತ್ತೆ ಆಧಾರಿತ ನವೀನತೆಗೆ ಭಾರತದಲ್ಲಿರುವ ಅವಕಾಶಗಳ ಬಗ್ಗೆ ವಿವರಿಸಿದರು.
ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ.ಎಸ್.ಎನ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ರಾಮಕೃಷ್ಣ ಹೆಗಡೆ ವಹಿಸಿದ್ದರು. ಸ್ಮಾರ್ಟ್ ಇನೋವೇಶನ್ ಕೇಂದ್ರದ ಸಮಗ್ರ ಅವಲೋಕನವನ್ನು ಸ್ರಜನ್ ಕುಲಾಲ್ ನೀಡಿದರು.
ಎಐಎಂಎಲ್ ವಿಭಾಗದ ಪ್ರಾಧ್ಯಾಪಕಿ ಶ್ರೀನಿಧಿ ಸ್ವಾಗತಿಸಿದರೆ, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಅಕ್ಷತಾ ನಾಯಕ್ ಹಾಗೂ ಪ್ರಾದ್ಯಾಪಕಿ ಸುಷ್ಮ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ದಿಲೀಪ್ ಕಾರ್ಯಕ್ರಮ ನಿರೂಪಿಸಿದರು.






