ಅಜೆಕಾರು: ಶಾಲೆಯಲ್ಲಿ ಕಸಕ್ಕೆ ಬೆಂಕಿ; ಸ್ಫೋಟದಿಂದ ನಾಲ್ವರು ಮಕ್ಕಳಿಗೆ ಸುಟ್ಟಗಾಯ

ಸಾಂದರ್ಭಿಕ ಚಿತ್ರ
ಅಜೆಕಾರು, ಜೂ.4: ಶಾಲೆಯ ದೈಹಿಕ ಶಿಕ್ಷಕರ ಸೂಚನೆಯಂತೆ ಕಂಪ್ಯೂಟರ್ ಕ್ಲಾಸ್ನ ಕಸವನ್ನು ಗುಡಿಸಿ ಶಾಲಾ ಕಾಂಪೌಂಡಿನ ಒಂದು ಮೂಲೆಯಲ್ಲಿ ಹಾಕಿ ಅದಕ್ಕೆ ಬೆಂಕಿ ಹಾಕಿ ಸುಡಲು ತಿಳಿಸಿದಂತೆ ಬೆಂಕಿ ಹಾಕಿದಾಗ ಕಸದಲ್ಲಿದ್ದ ಯಾವುದೋ ಡಬ್ಬದಂತ ವಸ್ತು ಸ್ಪೋಟಗೊಂಡ ನಾಲ್ವರು ಮಕ್ಕಳಿಗೆ ಸುಟ್ಟ ಗಾಯಗಳಾದ ಘಟನೆ ಕಾರ್ಕಳ ತಾಲೂಕು ಕುಕ್ಕುಜೆ ಸರಕಾರಿ ಪ್ರಾಧಮಿಕ ಶಾಲೆಯಲ್ಲಿ ಬುಧವಾರ ಅಪರಾಹ್ನ 12ಗಂಟೆ ಸುಮಾರಿಗೆ ನಡೆದಿದೆ.
ಗಾಯಗೊಂಡ ಮಕ್ಕಳನ್ನು ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳಾದ ಸಂಸ್ಕೃತ್ (12), ಗಗನ್ (12), ಹೃತ್ವಿಕ್ (12), ಅದ್ವಿನ್ (11) ಎಂದು ಗುರುತಿಸಲಾಗಿದೆ.
ನಿರ್ಲಕ್ಷತನದಿಂದ ಶಾಲಾ ಮಕ್ಕಳಿಗೆ ಕಸಕ್ಕೆ ಬೆಂಕಿ ಹಾಕಲು ಹೇಳಿ ಯಾವುದೇ ಮುಂಜಾಗ್ರತಾ ಕ್ರಮವನ್ನು ವಹಿಸದೇ ಇರುವುದು ಕೃತ್ಯಕ್ಕೆ ಕಾರಣ ಎಂದು ವಿದ್ಯಾರ್ಥಿ ಸಂಸ್ಕೃತ್ ಅವರ ತಂದೆ ಕಡ್ತಲದ ನಿತ್ಯಾನಂದ್ ನಾಯಕ್ ಅಜೆಕಾರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story




