ಅಲ್-ಇಹ್ಸಾನ್ ಕಬಡ್ಡಿ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾಪು, ಆ.7: ಶಾಲಾ ಶಿಕ್ಷಣ ಇಲಾಖೆ ಉಡುಪಿ ವಲಯ ಮತ್ತು ಉಡುಪಿ ಸೈಂಟ್ ಸಿಸಿಲಿ ವಿದ್ಯಾ ಸಂಸ್ಥೆಯ ಸಹ ಯೋಗದಲ್ಲಿ ನಡೆದ 14ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಅಲ್-ಇಹ್ಸಾನ್ ಅಕಾಡೆಮಿ ಸ್ಕೂಲ್ ಮೂಳೂರು ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟಕ್ಕೆ ಆಯ್ಕೆಯಾಗಿದೆ.
ಸಂಸ್ಥೆಯ ಅಡಳಿತಾಧಿಕಾರಿ ಪ್ರೊ.ಯೂಸೂಫ್, ಪ್ರಾಂಶುಪಾಲ ಕೆ.ಎಸ್. ಹಬೀಬುರ‌್ರಹ್ಮಾನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸೈಯ್ಯದ್ ಶಬಾನಾ, ದೈಹಿಕ ಶಿಕ್ಷಣ ಶಿಕ್ಷಕರಾದ ಬಶೀರ್ ಎಂ., ಸದ್ದಾಂ ಹುಸೇನ್ ಮತ್ತು ಸುಮನ ಕಿಶೋರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
Next Story





