ಕಾರ್ಕಳ : ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟ

ಕಾರ್ಕಳ : ಸರಕಾರಿ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿಗಳ ಕ್ರೀಡಾಕೂಟವು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು.
ಅಂತರಾಷ್ಟ್ರೀಯ ಕ್ರೀಡಾಪಟು ಬಾಬು ಶೆಟ್ಟಿ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯಕರ ಜೀವನಕ್ಕೆ ಕ್ರೀಡೆ ಅತ್ಯವಶ್ಯಕ. ಕ್ರೀಡೆಯಿಂದ ದೈಹಿಕ, ಮಾನಸಿಕವಾಗಿ ದೇಹವು ವಿಕಾಸನಗೊಳ್ಳುತ್ತದೆ. ರಾಷ್ಟ್ರ ಅಂತರಾಷ್ಟ್ರೀಯ ನನ್ನ ಸಾಧನೆಗೆ ಈ ಕ್ರೀಡಾಂಗಣವೇ ಸ್ಪೂರ್ತಿ ಎಂದರು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಕರೆ ನೀಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜಿನ ಅಭಿವೃದ್ಧಿಗಾಗಿ ಹಳೆವಿದ್ಯಾರ್ಥಿ ಸಂಘವನ್ನು ಪುನರಚಿಸಲಾಗಿದೆ. ಈ ಶಾಲೆಯಿಂದ ಕಲಿತ ಅದೇಷ್ಟೋ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ ಅಂತಹ ವಿದ್ಯಾರ್ಥಿಗಳ ಸಮ್ಮೀಲನಕ್ಕಾಗಿ ಕ್ರೀಡಾಕೂಟವನ್ನು ಹಂಬಿಕೊಳ್ಳಲಾಗಿದೆ ಎಂದರು.
ಉದ್ಯಮಿ ಲಾರೆನ್ಸ್ ಸಲ್ದಾನ ಕ್ರೀಡಾ ಧ್ವಜರೋಹಣಗೈದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ವಾಗ್ಲೆ, ಹಳೆವಿದ್ಯಾರ್ಥಿ ಗೌರವಾಧ್ಯಕ್ಷ ಪ್ರಸನ್ನ ಶೆಟ್ಟಿ, ಬೈಲೂರು ಕಾಲೇಜು ಪ್ರಾಂಶುಪಾಲರಾದ ಸೀತಾರಾಮ್, ಉಪ ಪ್ರಾಂಶುಪಾಲರಾದ ನಾಗರಾಜ್, ದೈಹಿಕ ಶಿಕ್ಷಣ ಶಿಕ್ಷಕರಾದ ಫೆಡ್ರಿಕ್ ರೆಬೆಲ್ಲೊ, ಕ್ರೀಡಾ ಕಾರ್ಯದರ್ಶಿ ಶಾಕೀರ್ ಹುಸೇನ್, ನೀರೆ ಗ್ರಾಮ ಪಂಚಾಯತ್ ಸದಸ್ಯರಾದ ಹೈದರಾಲಿ ಉಪಸ್ಥಿತರಿದ್ದರು.
ರಮೇಶ್ ಶೆಟ್ಟಿ ನಿರೂಪಿಸಿದರು, ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಶಾಕಿರ್ ಹುಸೇನ್ ಸ್ವಾಗತಿಸಿದರು, ಸುರೇಶ್ ಶೆಟ್ಟಿ ವಂದಿಸಿದರು.







