Udupi | ಅಂಬಲಪಾಡಿ ಪ್ಲೈಓವರ್ ಕೆಳಗಡೆ ವಾಹನ ಸಂಚಾರ ಆರಂಭ

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನ.28ರ ಉಡುಪಿ ಭೇಟಿಯ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಆದೇಶದಂತೆ ಇಂದಿನಿಂದ ಅಂಬಲಪಾಡಿ ಜಂಕ್ಷನ್‌ನ ಪ್ಲೈ ಓವರ್ ಕೆಳಗಡೆ ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಅದರಂತೆ ಬೆಳಗ್ಗೆಯಿಂದ ಪ್ಲೈಓವರ್‌ನ ಕೆಳಗಡೆ ಒಂದು ಬದಿಯಲ್ಲಿ ಅಂಬಲಪಾಡಿ ಕಡೆಯಿಂದ ಬ್ರಹ್ಮಗಿರಿ ಕಡೆ ಹಾಗೂ ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ ಕಡೆಗೆ ವಾಹನಗಳು ಸಂಚಾರ ಆರಂಭಿಸಿವೆ. ಈ ತಾತ್ಕಾಲಿಕ ಅನುಮತಿಯನ್ನು ನ.30ರವರೆಗೆ ಕಲ್ಪಿಸಲಾಗಿದ್ದು, ಅಲ್ಲಿಯವರೆಗೆ ವಾಹನ ಗಳು ಈ ಮಾರ್ಗವನ್ನು ಬಳಸಬಹುದಾಗಿದೆ. ಇದರಿಂದ ಕರಾವಳಿ ಬೈಪಾಸ್ ಬಳಿ ವಾಹನ ದಟ್ಟನೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.
Next Story





