ಆಂಬುಲೆನ್ಸ್ ಚಾಲಕ ಆತ್ಮಹತ್ಯೆ

ಕುಂದಾಪುರ, ಜು.27: ಸಮಾಜ ಸೇವಕ, ಆಂಬುಲೆನ್ಸ್ ಚಾಲಕ ಅಯೂಬ್ ಕೆ.ಎಸ್. ಕೋಟೇಶ್ವರ(56) ಮನೆಯಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.
ಇವರು ಹಲವು ವರ್ಷಗಳಿಂದ ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕರಾಗಿದ್ದು ಸಮಾಜ ಸೇವಕರಾಗಿದ್ದರು. ತಿಂಗಳ ಹಿಂದೆ ಸ್ವಂತ ಆಂಬುಲೆನ್ಸ್ ಖರೀದಿಸಿದ್ದು ಇತ್ತೀಚೆಗೆ ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಡಿವೈಡರ್ ಬಳಿ ನಿಯಂತ್ರಣ ತಪ್ಪಿ ಬ್ಯಾರಿ ಕೇಡ್‌ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ದುರಸ್ತಿ ಹಣ ಇಲ್ಲದ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು, ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





