ಪಾಳುಬಿದ್ದ ಕಟ್ಟಡದಲ್ಲಿ ಅಪರಿಚಿತ ಶವ ಪತ್ತೆ

ಉಡುಪಿ, ಅ.19: ಕಲ್ಸಂಕ ಸಮೀಪ ನಿರ್ಮಾಣ ಹಂತದಲ್ಲಿ ಅರ್ಧಕ್ಕೆ ನಿಂತಿರುವ ಕನಕ ಮಹಲ್ ಕಟ್ಟಡದ ಕೆಳ ಅಂತಸ್ತಿನಲ್ಲಿ ಸುಮಾರು 35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಕೊಳತ ಸ್ಥಿತಿಯಲ್ಲಿ ಅ.18ರಂದು ಸಂಜೆ ವೇಳೆ ಪತ್ತೆಯಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟ್ಟಡದ ನಿರ್ಮಾಣ ಕಾಮಗಾರಿಯು ಸ್ಥಗಿತಗೊಂಡು ಹಲವು ವರ್ಷಗಳು ಕಳೆದಿವೆ. ಕಟ್ಟಡದ ಸುತ್ತ ತಡೆ ಬೇಲಿ ಇಲ್ಲ. ಇಲ್ಲಿ ಈಗಾಗಲೇ ಹತ್ತಾರು ಕೊಳೆತ ಶವಗಳು ಸಿಕ್ಕಿರುವ ಘಟನೆಗಳು ನಡೆದಿವೆ. ಇದೊಂದು ಭಯಾನಕ ಕಟ್ಟಡ ವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸ್ಥಳದಲ್ಲಿ ಸಾರ್ವಜನಿಕರು ಒಳ ನುಸುಳದಂತೆ ತಡೆಗೊಡೆ ನಿರ್ಮಿಸುವಂತೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
Next Story





