ಅಂದರ್ ಬಾಹರ್: ಮೂವರ ಬಂಧನ

ಕುಂದಾಪುರ, ಡಿ.22: ಕಾಳಾವರ ಗ್ರಾಮದ ಅರೆಕಲ್ಲು ಜನತಾ ಕಾಲೂನಿ ಹತ್ತಿರದ ಸರಕಾರಿ ಹಾಡಿಯಲ್ಲಿ ಡಿ.20ರಂದು ರಾತ್ರಿ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ರಾಕೇಶ್(24), ಮ್ಯಾಕ್ಸಿ ರೋಶನ್(39), ಸತೀಶ್(37) ಬಂಧಿತ ಆರೋಪಿಗಳು. ಉಳಿದಂತೆ ಪ್ರಕಾಶ, ರಾಜೇಶ್ ಮತ್ತು ಸುಜನ್ ಎಂಬವರು ಪೊಲೀಸ್ ದಾಳಿ ವೇಳೆ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರಿಂದ 4,450ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





