ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಕ್ಷೇತ್ರದ ವಾರ್ಷಿಕ ಮಹೋತ್ಸವ

ಉಡುಪಿ : ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವನ್ನು ಗುರುವಾರ ವೈಭವ ಮತ್ತು ಭಕ್ತಿಯಿಂದ ಆಚರಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ ಮಹೋತ್ಸವದ ಪವಿತ್ರ ಬಲಿಪೂಜೆಯನ್ನು ಅರ್ಪಿಸಿ ಹಬ್ಬದ ಸಂದೇಶ ನೀಡಿದರು. ಉಡುಪಿಯ ಬಿಷಪ್ ಧರ್ಮಪ್ರಾಂತ್ಯದ ಡಾ.ಜೆರಾಲ್ಡ್ ಐಸಾಕ್ ಲೋಬೋ ತಮ್ಮ ಸಂದೇಶ ದಲ್ಲಿ ಮೇರಿ ಮಾತೆಯನ್ನು ಭರವಸೆಯ ರಾಣಿ ಎಂದು ಪ್ರತಿಬಿಂಬಿಸಿದರು.
ಕಲ್ಮಾಡಿ ಪುಣ್ಯಕ್ಷೇತ್ರಕ್ಕೆ ಬರುವ ಸಂದರ್ಶಕರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದು ನಮ್ಮ ಧರ್ಮಪ್ರಾಂತ್ಯದಲ್ಲಿ ಮಾತೆ ಮೇರಿಗೆ ಸಮರ್ಪಿತ ವಾಗಿರುವ ಏಕೈಕ ದೇಗುಲವಾಗಿದೆ. ಯೇಸು ಕ್ರಿಸ್ತನಲ್ಲಿ ತನ್ನ ಬಳಿಗೆ ಹೋಗಲು ಮೇರಿ ಮಾತೆ ನಮ್ಮನ್ನು ಕರೆದೊಯ್ಯುತ್ತಾಳೆ, ನಾವೆಲ್ಲರೂ ಆತನ ಆಜ್ಞೆಗಳನ್ನು ಪಾಲಿಸೋಣ ಮತ್ತು ಆತನ ಆಶೀರ್ವಾದವನ್ನು ಪಡೆಯೋಣ ಎಂದರು.
ಕಲ್ಮಾಡಿ ವೆಲಂಕಣಿ ಪುಣ್ಯಕ್ಷೇತ್ರದ ರೆಕ್ಟರ್ ವಂ.ಬ್ಯಾಪ್ಟಿಸ್ಟ್ ಮಿನೇಜಸ್ ವಲಯ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಪಾಲನಾ ಸಮಿತಿಯ ಉಪಾಧ್ಯಕ್ಷ ಐಡಾ ಡಿಸೋಜ, ಕಾರ್ಯದರ್ಶಿ ಸ್ಟ್ಯಾನ್ಲಿ ಮಿನೇಜಸ್, 20 ಆಯೋಗಗಳ ಸಂಚಾಲಕ ಜೆನವಿವ್ ಲೋಬೊ ಉಪಸ್ಥಿತರಿದ್ದರು.





