'ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ'ಕ್ಕೆ ಅರ್ಜಿ ಆಹ್ವಾನ

Kota Shivaram Karanth
ಬ್ರಹ್ಮಾವರ, ಆ.26: ಡಾ.ಶಿವರಾಮ ಕಾರಂತ ಅವರ ನೆನಪಿನಲ್ಲಿ ನೀಡಲಾಗುವ 6ನೇ ವರ್ಷದ 'ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ-2026'ಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹೆಸರು ಸೂಚಿಸಲು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿಯ ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂದೀಪ್ ಶೆಟ್ಟಿ ಸಾರಥ್ಯದ ಏಸ್ ಕ್ರೀಟ್ ಅಡೆಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ’ಉಸಿರು ಕೋಟ’ ಸಂಸ್ಥೆ ಜಂಟಿ ಆಶ್ರಯದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
ಹೆಸರು ಸೂಚಿಸಲು ಇಚ್ಛಿಸುವ ಪ್ರತಿನಿಧಿಗಳು, ಸಾರ್ವಜನಿಕರು, ತಾವು ಶಿಫಾರಸು ಮಾಡುವ ಶಿಕ್ಷಕರ ಹೆಸರು ಹಾಗೂ ಅವರ ಆಯ್ಕೆಗೆ ಸಂಬಂಧಿಸಿದ ಐದು ಕಾರಣಗಳನ್ನು ಉಲ್ಲೇಖಿಸಿ, 9663750499 ಈ ಸಂಖ್ಯೆಗೆ ವಾಟ್ಸ್ ಆಪ್ ನಲ್ಲಿ ಕಳುಹಿಸಬಹುದು ಎಂದು ಕಾರಂತ ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪಿಡಿಒ ರವೀಂದ್ರರಾವ್, ಆಡಳಿತಾಧಿಕಾರಿ ಪ್ರಕಾಶ್ ಚಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿ ಸುಮತಿ ಅಂಚನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




