ನೆರೆಕರೆ ಮಧ್ಯೆ ಗಲಾಟೆ: ರಿಕ್ಷಾಕ್ಕೆ ಬೆಂಕಿ

ಉಡುಪಿ, ಸೆ.26: ಗಲಾಟೆ ವಿಚಾರದ ಬಗ್ಗೆ ಪೊಲೀಸರಿಗೆ ದೂರು ನೀಡಿದ ಧ್ವೇಷದಲ್ಲಿ ನೆರೆಮನೆಯಾತ ರಿಕ್ಷಾಕ್ಕೆ ಬೆಂಕಿ ಹಚ್ಚಿ ರುವ ಘಟನೆ ಸೆ.25ರಂದು ರಾತ್ರಿ ವೇಳೆ ಉಡುಪಿ ಪುತ್ತೂರು ದ್ರಾಮದ ಹನುಮಂತ ನಗರ ಎಂಬಲ್ಲಿ ನಡೆದಿದೆ.
ಹನುಮಂತ ನಗರದ ದಿವಾಕರ ಬೆಳ್ಚಡ ಎಂಬವರ ಪತ್ನಿ ಜೊತೆ ನೆರೆಮನೆಯ ಖಲೀಂ ಎಂಬಾತ ಜಗಳ ಮಾಡಿದ್ದು, ಬಳಿಕ ಆತ ದಿವಾಕರ್ ಅವರ ಮನೆಯ ಮಾಡಿಗೆ ಇಂಟರ್‌ಲಾಕ್ ತುಂಡು ಎಸೆದು ಹೆಂಚಿಗೆ ಹಾನಿಗೈದಿದ್ದನು. ಈ ಬಗ್ಗೆ ದಿವಾಕರ್, ಪೊಲೀಸರಿಗೆ ದೂರು ನೀಡಿದ್ದರು.
ಇದೇ ವಿಚಾರದಲ್ಲಿ ದ್ವೇಷಗೊಂಡ ಖಲೀಂ, ದಿವಾಕರ್ ಅವರ ಮನೆಯ ಎದುರು ನಿಲ್ಲಿಸಿದ್ದ ಅವರ ಆಟೋರಿಕ್ಷಾಗೆ ಬೆಂಕಿಹಚ್ಚಿ ಓಡಿ ಹೋಗಿರುವುದಾಗಿ ದೂರಲಾಗಿದೆ. ಇದರಿಂದ ರಿಕ್ಷಾದ ಟಾಪ್ ಹಾಗೂ ಹಿಂಭಾಗ ಸಂಪೂರ್ಣ ಸುಟ್ಟುಹೋಗಿದ್ದು, ಇದರಿಂದಾಗಿ ಸುಮಾರು 1 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





