ಉಡುಪಿ: ಗಾಂಜಾ ಮಾಡುತ್ತಿದ್ದ ಆರೋಪಿಯ ಬಂಧನ

ಉಡುಪಿ: ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಮಣಿಪಾಲ ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ಡಯಾನಾ ಟಾಕೀಸ್ ರಸ್ತೆಯ ಕ್ರಾಸ್ ಬಳಿ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಹಾರದ ಬ್ರಹಂದೇವ್ ಯಾದವ್(37) ಬಂಧಿತ ಆರೋಪಿ. ಈತನಿಂದ 690 ಗ್ರಾಂ ಗಾಂಜಾ, ಮೊಬೈಲ್ ಪೋನ್, 680ರೂ. ಮತ್ತು ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 68,680ರೂ. ಎಂದು ಅಂದಾಜಿಸಲಾಗಿದೆ.
ಸೆನ್ ಪೊಲೀಸ್ ಠಾಣಾ ಪೊಲೀಸ್ ಉಪಾಧೀಕ್ಷಕ ಎ.ಸಿ ಲೋಕೇಶ್ ಮತ್ತು ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಎ.ಎಸ್.ಐ. ಉಮೇಶ್, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ರಾಘವೇಂದ್ರ, ವೆಂಕಟೇಶ್, ಸಂತೋಷ, ಧರ್ಮಪ್ಪ, ಅರುಣ್ ಕುಮಾರ್, ದಿಕ್ಷೀತ್, ಪವನ್, ನಿಲೇಶ್, ಪರಶುರಾಮ್, ಮುತ್ತಪ್ಪ, ಮಾಯ್ಯಪ್ಪ ಮತ್ತು ಚರಣ್ ರವರ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





