ಕಲಾವಿದ ಲಕ್ಷ್ಮೀನಾರಾಯಣ ಎಸ್. ಆರ್. ನಿಧನ

ಉಡುಪಿ: ಸೀತೂರು, ನಾಗರಕೋಡಿಗೆ, ಕಳ್ವಾಡಿ, ಶಿವರಾಜಪುರ, ಬಗ್ವಾಡಿ ಮೇಳಗಳಲ್ಲಿ ಸುಮಾರು ಎರಡುವರೆ ದಶಕಗಳ ಕಾಲ ರಾಜವೇಷ ಮಾಡುತಿದ್ದ ಯಕ್ಷಗಾನ ಕಲಾವಿದ ಲಕ್ಷ್ಮೀನಾರಾಯಣ ಎಸ್. ಆರ್. (64) ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Next Story





