ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಆಯ್ಕೆ

ಅಶೋಕ್
ಕುಂದಾಪುರ, ಆ.20: ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಬೀಜಾಡಿ ಎರಡನೇ ಬಾರಿಗೆ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಕುಂದಾಪುರ ನಾರಾಯಣಗುರು ಸಭಾಭವನದಲ್ಲಿ ಇಂದು ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಸ ಲಾಯಿತು. ಕಾರ್ಯದರ್ಶಿಯಾಗಿ ಗಣೇಶ ವಿಠಲವಾಡಿ ಪುನರಾಯ್ಕೆಗೊಂಡಿದ್ದಾರೆ.
ಈ ಹಿಂದೆ ಕುಂದಾಪುರ ತಾಪಂ ಸದಸ್ಯರಾಗಿದ್ದ ಅವರು ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸತತ 17 ವರ್ಷಗಳಿಂದ ನಿರ್ದೇಶಕ ರಾಗಿ, ಎರಡನೇ ವರ್ಷದ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಬೀಜಾಡಿ ಮೀನು ಗಾರರ ಸಹಕಾರಿ ಸಂಘದಲ್ಲಿ ಪ್ರಸ್ತುತ ನಿರ್ದೇಶಕರಾಗಿದ್ದಾರೆ.
Next Story





