ಹಲ್ಲೆ ಪ್ರಕರಣ: ಗಾಯಾಳು ಆರೋಪಿ ಆಸ್ಪತ್ರೆಯಿಂದ ಪರಾರಿ

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಗಾಯಗೊಂಡಿದ್ದ ಆರೋಪಿ ಉಡುಪಿ ಜಿಲ್ಲಾ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಜ.21ರಂದು ಬೆಳಗಿನ ಜಾವ ನಡೆದಿದೆ.
ಜ.18ರಂದು ರಾತ್ರಿ ಕೊಡವೂರಿನ ಅಶ್ವಿನಿ ನಾಯ್ಕ್ ಎಂಬವರು ಸ್ನೇಹಿತೆ ಸುಷ್ಮಾಗೌಡ ಜೊತೆ ಅವರ ಮಾವನ ಮಗನಾದ ಪ್ರವೀಣ್‌ರನ್ನು ಹುಡುಕಿ ಕೊಂಡು ಬ್ರಹ್ಮಾವರದ ಬಾರ್ ಎದುರು ಬಂದು ಬಂದಿದ್ದರು. ಈ ವೇಳೆ ಅಲ್ಲಿಯೇ ಇದ್ದ ಆರೋಪಿ ಕಿರಣ್ ಪಿಂಟೋ, ಪ್ರವೀಣ್ ಡಿಕ್ರೋಜ್ ಜೊತೆ ಅಶ್ವಿನಿ ನಾಯ್ಕ್ ಹಾಗೂ ಸುಷ್ಮಾ ಗೌಡರಿಗೆ ಅವಾಚ್ಯ ಶಬ್ದಗಳಿಂದ ಬೈದಿದರು. ಆಗ ಅಶ್ವಿನಿ, ಅಲ್ಲಿ ಇದ್ದ ಪ್ರವೀಣ್‌ರನ್ನು ಎಬ್ಬಿಸಲು ಹೋದಾಗ ಪ್ರವೀಣ್ ಡಿಕ್ರೋಜ್, ಅಶ್ವಿನಿ ಹಾಗೂ ಸುಷ್ಮಾ ಗೌಡ ಅವರನ್ನು ಕೆಳಗೆ ಬಿಳಿಸಿ, ಅಶ್ವಿನಿ ಬಟ್ಟೆಯನ್ನು ಹರಿದು ಹಾಕಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತೆಂಕನಿಡಿಯೂರು ಗ್ರಾಮದ ಕಿರಣ್ ಪಿಂಟೋ ಠಾಣೆಗೆ ನೀಡಿದ ಪ್ರತಿದೂರಿನಲ್ಲಿ ಪ್ರವೀಣ್ ಬಾರ್ ಬಳಿ ಬರಲು ಹೇಳಿದ್ದು, ಸ್ಥಳಕ್ಕೆ ಕಾರಿನಲ್ಲಿ ಸುಜೀತ್ ಡಿಸೋಜ, ಸುಷ್ಮಾ ಗೌಡ ಹಾಗೂ ಅಶ್ವಿನಿ ನಾಯ್ಕ ಬಂದಿದ್ದರು. ಈ ವೇಳೆ ಆರೋಪಿ ಪ್ರವೀಣ್ ಕೂಡ ಇದ್ದನು. ಈ ವೇಳೆ ಪ್ರವೀಣ್ ಕಾರಿನಿಂದ ರಾಡ್ ತೆಗೆದು ಕಿರಣ್ ಪಿಂಟೋಗೆ ಹಲ್ಲೆ ನಡೆಸಿರುವುದಾಗಿ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಪೇತ್ರಿಯ ಸುಜಿತ್ ಡಿಸೋಜ ಮತ್ತು ಪ್ರವೀಣ್ ತೀರ್ಥಹಳ್ಳಿ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಸುಷ್ಮಾ ಗೌಡ ತಲೆಮರೆಸಿಕೊಂಡಿ ದ್ದರು. ಘಟನೆಯಲ್ಲಿ ಗಾಯಗೊಂಡು ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಿರಣ್ ಪಿಂಟೋ ಪರಾರಿಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.







