ಗಾಂಜಾ ಮಾರಾಟಕ್ಕೆ ಯತ್ನ: ನಾಲ್ವರ ಬಂಧನ

ಕಾರ್ಕಳ, ಆ.1: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಕಾರ್ಕಳ ನಗರ ಪೊಲೀಸರು ಮಿಯ್ಯಾರು ಗ್ರಾಮದ ಕರೋಲ್ಗುಡ್ಡೆ ಎಂಬಲ್ಲಿ ಜು.31ರಂದು ಅಪರಾಹ್ನ ವೇಳೆ ಬಂಧಿಸಿದ್ದಾರೆ.
ಕರೋಲ್ಗುಡ್ಡೆಯ ನರೇಂದ್ರ(40), ಸಾಣೂರು ಪುಲ್ಕೇರಿಯ ಸಿರಾಜ್(21), ತೆಳ್ಳಾರು ಮೇಲಿನಪಲ್ಕೆಯ ಅಬ್ದುಲ್ ಆರೀಫ್(26), ಬೈಲೂರು ಬಾಣಾಲುವಿನ ಜೀವನ(25) ಬಂಧಿತ ಆರೋಪಿಗಳು.
ಬಂಧಿತರಿಂದ 10,500ರೂ. ಮೌಲ್ಯದ ಗಾಂಜಾ, 1,800ರೂ. ನಗದು ಹಾಗೂ 50,000ರೂ. ಮೌಲ್ಯದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





