ಬಾರಕೂರು ಕಾಲೇಜಿನಲ್ಲಿ ಕಳವಿಗೆ ಯತ್ನ

ಬ್ರಹ್ಮಾವರ, ಸೆ.12: ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳವಿಗೆ ಯತ್ನಿಸಿದ ಘಟನೆ ಸೆ.9ರಿಂದ ಸೆ.11ರ ಮಧ್ಯಾವಧಿಯಲ್ಲಿ ನಡೆದಿದೆ.
ಕಾಲೇಜಿನ ನೆಲ ಅಂತಸ್ತಿನಲ್ಲಿರುವ ಪ್ರಾಂಶುಪಾಲರ ಕೊಠಡಿ ಹಾಗೂ ಕಛೇರಿಯ ಬೀಗ ಒಡೆದು ಒಳನುಗ್ಗಿದ ಕಳ್ಳರು, ಕಛೇರಿಯಲ್ಲಿನ 3 ಹಾಗೂ ರೆಕಾರ್ಡ ರೂಮಿನ 12 ಕಪಾಟು ಬಾಗಿಲುಗಳನ್ನು ತೆರೆದು, ಅಲ್ಲದೇ ಕಛೇರಿಯ ಮೇಜುಗಳ ಡ್ರಾವರ್‌ಗಳ ಬೀಗಗಳನ್ನು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿ ಹೋಗಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





