ಆ.5: ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ

ಉಡುಪಿ, ಆ.4: 2022 ಮತ್ತು 2023ನೇ ಸಾಲಿನ ಕೇಶವ ಪ್ರಶಸ್ತಿ ಹಾಗೂ 2023ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಆ.5ರ ಶನಿವಾರ ಉಡುಪಿ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.
2022 ಹಾಗೂ 2023ರ ಸಾಲಿನ ಕೇಶವ ಪ್ರಶಸ್ತಿಯನ್ನು ಬಹುಮುಖ ಸಾಧಕರಾದ ಡಾ.ಹರಿಕೃಷ್ಣ ಭರಣ್ಯ ಹಾಗೂ ಡಾ.ಎನ್.ಆರ್. ನಾಯಕ್ ಹಾಗೂ 2023ನೇ ಸಾಲಿನ ಕಡೆಂಗೋಡ್ಲು ಕಾವ್ಯಪ್ರಶಸ್ತಿಯನ್ನು ಶಂಕರ ಸಿಹಿಮೊಗ್ಗೆ ಶಿವಮೊಗ್ಗ ಇವರಿಗೆ ಪ್ರದಾನ ಮಾಡಲಾಗುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವಹಿಸಲಿರು ವರು. ಮುಖ್ಯ ಅತಿಥಿಗಳಾಗಿ ಕೆಎಂಸಿಯ ಡೀನ್ ಡಾ.ಪದ್ಮರಾಜ ಹೆಗ್ಡೆ ಪಾಲ್ಗೊಳ್ಳುವರು. ಡಾ.ಜಿ.ಶಂಕರ್ ಸ.ಮ.ಪ್ರ.ದ. ಕಾಲೇಜು ಮತ್ತು ಸ್ನಾ. ಅ. ಕೇಂದ್ರದ ಪ್ರಾಧ್ಯಾಪಕ ಡಾ. ರವಿರಾಜ ಶೆಟ್ಟಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಕಡೆಂಗೋಡ್ಲು ಪ್ರಶಸ್ತಿ ವಿಜೇತ ‘ಇರುವೆ ಮತ್ತು ಗೋಡೆ’ ಕವನ ಸಂಕಲನವನ್ನು ಪರಿಚಯಿಸಲಿದ್ದಾರೆ. ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ‘ಗಿರಿಜಾ ಕಲ್ಯಾಣ ಮರು ಓದು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು ಎಂದು ಪ್ರಕಟಣೆ ತಿಳಸಿದೆ.