ಎವೈಐಎಂಯುಎಂ ಸಮ್ಮೇಳನ: ಗೀತಾಂಜಲಿಗೆ ಬೆಸ್ಟ್ ಡೆಲಿಗೇಟ್ ಪ್ರಶಸ್ತಿ

ಕುಂದಾಪುರ, ಜ.13: ಕುಂದಾಪುರ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಗೀತಾಂಜಲಿ ಶಿವಗೊಂಡ ಚೌಗಲಾ ಮಲೇಷ್ಯಾದ ಕೌಲಾಲಂಪುರ ನಗರದಲ್ಲಿ ನಡೆದ ಅತಿ ದೊಡ್ಡ ಯುವ ನಾಯಕತ್ವ ಸಮ್ಮೇಳನಗಳಲ್ಲಿ ಒಂದಾದ ಎವೈಐಎಂಯುಎಂ-2025ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಈ ಸಮ್ಮೇಳನಕ್ಕೆ ಭಾರತದಿಂದ ಕೇವಲ ಏಳು ವಿದ್ಯಾರ್ಥಿಗಳು ಮಾತ್ರ ಆಯ್ಕೆಗೊಂಡಿದ್ದು, ಅವರಲ್ಲಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಗೌರವ ಗೀತಾಂಜಲಿಗೆ ದೊರಕಿದೆ. ಅವರ ಆಯ್ಕೆ ಶೈಕ್ಷಣಿಕ ಸಾಮರ್ಥ್ಯ ಹಾಗೂ ಸಂಶೋಧನಾ ಲೇಖನ ಆಧಾರದ ಮೇಲೆ ನಡೆಯಿತು.
ಸಮ್ಮೇಳನದಲ್ಲಿ ಇವರು, ಜಾಗತಿಕ ಆರ್ಥಿಕತೆ, ತಾಂತ್ರಿಕ ಅಭಿವೃದ್ಧಿ ಹಾಗೂ ವಿಜ್ಞಾನ-ಆಧಾರಿತ ಸಂಶೋಧನೆಯ ಪ್ರಾಮುಖ್ಯತೆ ಕುರಿತ ವಿಚಾರಗಳನ್ನು ವಿಶ್ಲೇಷಣೆ ಮಾಡಿ ಮಂಡಿಸಿದರು. ಈ ಮಂಡಳಿಯ ಚರ್ಚೆಯಲ್ಲಿ ಅತ್ಯುತ್ತಮ ಪ್ರಸ್ತುತಿ ಹಾಗೂ ವಾದ-ವಿವಾದದ ಕೌಶಲ್ಯ ಪ್ರದರ್ಶಿಸಿದಕ್ಕಾಗಿ ಅವರಿಗೆ ಬೆಸ್ಟ್ ಡೆಲಿಗೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
Next Story





