ಬಡಗಬೆಟ್ಟು ಗ್ರಾ.ಪಂ: ತೆರಿಗೆ ಪರಿಷ್ಕರಣೆ ಪಟ್ಟಿ ಪ್ರಕಟ
ಉಡುಪಿ : 80 ಬಡಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಎ.1ರಿಂದ ಅನ್ವಯ ವಾಗುವಂತೆ ಕಟ್ಟಡ, ಭೂಮಿ ತೆರಿಗೆ ಹಾಗೂ ಇತರೇ ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗಿದೆ.
ಕಟ್ಟಡಗಳ ಪರಿಷ್ಕೃತ ತೆರಿಗೆ ನಿರ್ಧರಣಾ ಪಟ್ಟಿಗೆ ಸಂಬಂಧಿಸಿದಂತೆ ನಿರ್ಧರಿಸಲಾದ ತೆರಿಗೆ, ಕಟ್ಟಡದ ಮಾಲಕತ್ವ, ಇತ್ಯಾದಿ ಬಗ್ಗೆ ಕಟ್ಟಡ ಮಾಲಕರು ಹಾಗೂ ಅನುಬೋಗಧಾರರಿಂದ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಲಿಖಿತ ಆಕ್ಷೇಪಣೆ ಅರ್ಜಿಯನ್ನು ಪ್ರಕಟಣೆಯ ದಿನದಿಂದ ೩೦ ದಿನಗಳ ಒಳಗೆ ಕಚೇರಿ ಅವಧಿಯಲ್ಲಿ ಬಡಗಬೆಟ್ಟು ಗ್ರಾಮ ಪಂಚಾಯತ್ ಕಚೇರಿಗೆ ಸಲ್ಲಿಸಬಹುದು.
ನಿಗದಿತ ಆಕ್ಷೇಪಣಾ ಅವಧಿಯ ನಂತರ ಆಕ್ಷೇಪಣಾ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಪರಿಷ್ಕೃತ ತೆರಿಗೆ ನಿರ್ಧರಣಾ ಪಟ್ಟಿಯನ್ನು ನಿಯಮಾನುಸಾರ ಖಾಯಂ ಮಾಡಲಾಗುವುದು ಎಂದು ಬಡಗಬೆಟ್ಟು ಗ್ರಾಮ ಪಂಚಾಯತ್‌ನ ಕಚೇರಿ ಪ್ರಕಟಣೆ ತಿಳಿಸಿದೆ.
Next Story





