ಬೈಂದೂರು: ಸಿಮೆಂಟ್ ಲಾರಿ ಪಲ್ಟಿ; ಚಾಲಕ ಮೃತ್ಯು

ಬೈಂದೂರು: ಸಿಮೆಂಟ್ ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಒತ್ತಿನೆಣೆ ತಿರುವಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಝಾರ್ಖಂಡ್ ಮೂಲದ ದಾಮೋದರ ಯಾದವ್ (55) ಮೃತ ಚಾಲಕ. ಲೋಕಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





