Baindur | ಮನೆಗೆ ನುಗ್ಗಿ ಚಿನ್ನಾಭರಣ ಕಳವು : ಪ್ರಕರಣ ದಾಖಲು

ಬೈಂದೂರು : ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಆ.25ರ ರಾತ್ರಿಯಿಂದ ಆ.28ರ ಮಧ್ಯಾವಧಿಯಲ್ಲಿ ಯಳಜಿತ ಗ್ರಾಮದ ಕೆಳಕೋಟಿಕೇರೆ ಎಂಬಲ್ಲಿ ನಡೆದಿದೆ.
ವನಿತಾ ಎಂಬವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಗೊಡ್ರೇಜ್ ನ ಲಾಕರನಲ್ಲಿರಿಸಿದ ಒಟ್ಟು 52 ಗ್ರಾಂ ತೂಕದ ಸುಮಾರು 3,64,000 ರೂ. ಮೌಲ್ಯದ ಚಿನ್ನದ ಕನಕ ಮಾಲೆ ಸರ, ಚಿನ್ನದ ಚೈನ್ ಮತ್ತು ರೋಪ ಚೈನ್ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,64,000 ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




