Baindur | ಇಸ್ಪೀಟ್ ಜುಗಾರಿ : ನಾಲ್ವರ ಬಂಧನ

ಬೈಂದೂರು : ಶಿರೂರು ಮೈದಿನಪುರ ಎಂಬಲ್ಲಿ ಜೂ.29ರಂದು ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಭಟ್ಕಳದ ಶ್ರೀಧರ(44), ಶಿರೂರಿನ ಸಂತೋಷ ಕುಮಾರ್(35), ಶಿರೂರು ನೀರ್ಗದ್ದೆಯ ಸುರೇಶ್(43), ಭಟ್ಕಳ ಮುಂಡೊಳ್ಳಿಯ ದೇವೇಂದ್ರ(38) ಬಂಧಿತ ಆರೋಪಿಗಳು.
ಪೊಲೀಸ್ ದಾಳಿ ವೇಳೆ ಆರೋಪಿಗಳಾದ ಕೃಷ್ಣ ಗಾಣಿಗ, ಗಣೇಶ್ ಪೂಜಾರಿ ಶಿರೂರು ಓಡಿಹೋಗಿದ್ದಾರೆ. ಬಂಧಿತರಿಂದ 1420ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




