ಬಂಗ್ಲೆಗುಡ್ಡೆ : ಸಲ್ಮಾನ್ ಜುಮ್ಮಾ ಮಸ್ಜಿದ್ ನಲ್ಲಿ 80ನೇ ಸ್ವಾತಂತ್ರ್ಯೋತ್ಸವ

ಕಾರ್ಕಳ : ಹಯಾತುಲ್ ಇಸ್ಲಾಂ ಅಸೋಸಿಯೇಷನ್ ಬಂಗ್ಲೆಗುಡ್ಡೆ ಹಾಗೂ ಸಲ್ಮಾನ್ ಜುಮ್ಮಾ ಮಸ್ಜಿದ್ ಬಂಗ್ಲೆಗುಡ್ಡೆ ಆಶ್ರಯದಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಸಲ್ಮಾನ್ ಜುಮ್ಮಾ ಮಸ್ಜಿದ್ ವಠಾರದಲ್ಲಿ ಆಚರಿಸಲಾಯಿತು.
ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ತ್ವೈಬಾ ಗಾರ್ಡನ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ, ಸಲ್ಮಾನ್ ಜುಮ್ಮಾ ಮಸೀದಿ ಖತೀಬ್ ಸಯ್ಯದ್ ಫಝಲ್ ತಂಙಳ್, ಹಯಾತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ದಾವೂದ್ ಪರನೀರ್, ಕಾರ್ಯದರ್ಶಿ ಫಯಾಜ್, ಕೋಶಾಧಿಕಾರಿ ರಫೀಕ್, ನೂರುದ್ದಿನ್ ಕೆ, ಸುಹೇಲ್, ಮದ್ರಸ ಅಲ್ ಅಯ್ಯುಬಿ ಸದರ್ ಉಸ್ತಾದ್ ಮಂಗಳಪೇಟೆ ಮೊಯುದ್ದಿನ್ ಸಖಾಫಿ, ಸರ್ ಹಿಂದ್ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ಇಸ್ಮಾಯಿಲ್ ಮಾಸ್ಟರ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Next Story






