ಬನ್ನಂಜೆ ಶ್ರೀಗಣೇಶೋತ್ಸವ ಸಮಾರೋಪ: ಸಾಧಕರಿಗೆ ಗೌರವ

ಉಡುಪಿ: ಬನ್ನಂಜೆ ಮೂಡನಿಡಂಬೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಸಭಾ ವೇದಿಕೆಯಲ್ಲಿ ರಜತ ಸಮಾರಂಭದ ಸಮಾರೋಪ ಸಮಾರಂಭ ಜರಗಿತು.
ಸುಬ್ರಮಣ್ಯ ಮಠದ ಡಾ.ಆನಂದತೀರ್ಥ ಉಪಧ್ಯಾಯ ಧಾರ್ಮಿಕ ಪ್ರವಚನ ನೆಡೆಸಿಕೊಟ್ಟರು. ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿದರು. ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎಂ.ಪ್ರಭಾಕರ್ ಶೆಟ್ಟಿ ವಹಿಸಿದ್ದರು.
ಬನ್ನಂಜೆ ದೇವಳದ ಅಧ್ಯಕ್ಷ ಹರೀಶ್ ರಾಮ್, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಉದ್ಯಮಿಗಳಾದ ಪ್ರಭಾ ಕರ್ ಪೂಜಾರಿ, ದಿನೇಶ್ ಪುತ್ರನ್, ದೇವಳದ ಪ್ರಧಾನ ಅರ್ಚಕ ಪಾಡಿಗಾರು ವಾಸುದೇವ ಉಪಾಧ್ಯ, ಶೈಲೇಶ್ ಪ್ರಭು, ಸನ್ನಿ, ಕಲ್ಯಾಣ ಸಿಂಗ್, ಶ್ರೀಕಾಂತ್ ಕುಂಡಂತಾಯ್, ಪೊಲೀಸ್ ಸಿಬ್ಬಂದಿ ಹರೀಶ್ ಕುಂದರ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಸಾಧಕರನ್ನು ಗೌರವಿಸಲಾಯಿತು. ಸಮಿತಿಯ ಅಧ್ಯಕ್ಷ ಯೋಗೀಶ್ ಭಂಡಾರಿ ಬನ್ನಂಜೆ, ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ, ಯೋಗೀಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮನೋಹರ್ ಶಾಸ್ತ್ರಿ, ಕೋಶಾಧಿಕಾರಿ ಯು.ಸುಬ್ರಹ್ಮಣ್ಯ ರಾವ್, ಜೊತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ ಉಪಸ್ಥಿತರಿದ್ದರು. ಶುಭ ಸುಬ್ರಮಣ್ಯ ರಾವ್ ಸ್ವಾಗತಿಸಿದರು. ಸುಲೋಚನಾ ವಂದಿಸಿದರು.





