ವಕೀಲರ ಸಂಘದ ಶತಮಾನೋತ್ತರ ಬೆಳ್ಳಿಹಬ್ಬ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗೆ ಆಹ್ವಾನ

ಉಡುಪಿ, ಆ.18: ನ.17 ಮತ್ತು 18ರಂದು ನಡೆಯಲಿರುವ ಉಡುಪಿಯ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ಬೆಳ್ಳಿಹಬ್ಬ(125ನೇ ವಾರ್ಷಿಕೋತ್ಸವ)ವನ್ನು ಉದ್ಘಾಟಿಸುವಂತೆ ಉಡುಪಿ ವಕೀಲರ ಸಂಘದ ನಿಯೋಗವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ರವಿವಾರ ಭೇಟಿಯಾಗಿ ಆಹ್ವಾನಿಸಿತು.
ಈ ಬಗ್ಗೆ ಸಹಮತ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿಯೋಗದಲ್ಲಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಖಜಾಂಚಿ ಗಂಗಾಧರ ಎಚ್.ಎಂ., ಕಾರ್ಯಕಾರಿ ಸಮಿತಿ ಸದಸ್ಯ ಆರೂರು ಸುಕೇಶ್ ಶೆಟ್ಟಿ, ನ್ಯಾಯವಾದಿ ಶಿವಾನಂದ ಅಮೀನ್, ಹಿರಿಯ ವಕೀಲರಾದ ಆನಂದ ಮಡಿವಾಳ, ಜಯಕೃಷ್ಣ ಆಳ್ವ, ಹೈಕೋರ್ಟ್ ನ್ಯಾಯವಾದಿ ಹಾಗೂ ಲೋಕಾಯುಕ್ತ ವಿಶೇಷ ಅಭಿಯೋಜಕ ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು.
Next Story





