ನ.28 : ಡಾ ಮೋಹನ್ ಆಳ್ವರಿಗೆ 'ಬೆದರದ ಕಾಮಧೇನು' ಬಿರುದು ಪ್ರದಾನ ಕಾರ್ಯಕ್ರಮ

ಕಾರ್ಕಳ : ಶಿಕ್ಷಣದ ಹರಿಕಾರ, ಸಾಂಸ್ಕೃತಿಕ ರಾಯಭಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವರಿಗೆ ಅವರ 75 ವರ್ಷದ ಬದುಕಿನ ಸುಸಂದರ್ಭದಲ್ಲಿ ರಾಜ್ಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ನೇತೃತ್ವದಲ್ಲಿ ನ.28ರಂದು ನಡೆಯುವ ಕಾರ್ಯಕ್ರಮದಲ್ಲಿ 'ಬೆದರದ ಕಾಮಧೇನು' ಎಂಬ ಬಿರುದು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ರಾಜ್ಯ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲಕರ ಸಂಘದ ಅಧ್ಯಕ್ಷ ಡಾ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.
ಕಾರ್ಕಳ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 6ನೇ ವರ್ಷದ ಗೋ ದಾನ ಕಾರ್ಯಕ್ರಮ ನಡೆಯಲಿದ್ದು, ಸುಮಾರು ಬಡ ಹಾಗೂ ಗೋವುಗಳನ್ನ ಸಾಕಲು ವ್ಯವಸ್ಥೆ ಗಳಿರುವ ಪ್ರದೇಶದ 5 ಬಡ ಕುಟುಂಬಗಳಿಗೆ ಉತ್ತಮ ತಳಿಯ ಗೋವುಗಳನ್ನು ದಾನ ಮಾಡಲಾಗುವುದು
ಗೋಕಳ್ಳರಿಂದಾಗಿ ಗೋವುಗಳನ್ನು ಕಳಕೊಂಡವರಿಗಾಗಿ ದೀಪಾವಳಿ ಸಂದರ್ಭ ಗೋದಾನ ಕಾರ್ಯಕ್ರಮ ಆರಂಭಿಸಲಾಗಿದ್ದು ಇದೀಗ 6ನೇ ವರ್ಷ ಗೋದಾನ ನಡೆಸಲಾಗುತ್ತಿದೆ. ವಿಶೇಷವೆಂದರೆ ಇತ್ತೀಚೆಗೆ ಗೋ ಕಳ್ಳತನಕ್ಕೆ ಕಡಿವಾಣ ಬಿದ್ದಿದೆ. ಆದರೆ ಗೋವನ್ನು ಸಾಕಿ ಜೀವನ ನಿರ್ವಹಣೆ ಮಾಡಲು ಸಿದ್ಧರಿರುವ ಕುಟುಂಬಗಳಿಗೆ ಮಾತ್ರ ಗೋದಾನ ಮಾಡಲಾಗುತ್ತದೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸಿದ ದಿಶಾ ಪೂಜಾರಿ ಮೂಡುಬಿದಿರೆ, ಹಿಮಾಲಯ ಪರ್ವತವನ್ನು ಏರಿದ ಪತ್ರಕರ್ತೆ ಬಜಗೋಳಿ ಗುರುನಗರದ ಸುಮಲತಾ, ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸಿದ ನಲ್ಲೂರು ಶ್ರೀನಿಧಿ ಶೆಟ್ಟಿ ಎಂಬವರಿಗೆ 'ಅಂಬಾಶ್ರೀ' ಬಿರುದು ಪ್ರದಾನ ಮಾಡಲಾಗುವುದು ಎಂದರು
ಅಂದು ಸಂಜೆ 5.30ರಿಂದ ಗೋಪೂಜೆ, 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಂತರ ಆಳ್ವಾಸ್ ಸಾಂಸ್ಕೃತಿಕ ತಂಡದ ನರ ಶಾರ್ದೂಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸು ಡಾ.ಪದ್ಮಪ್ರಸಾದ್ ಅಜಿಲ ಸನ್ಮಾನ ಪ್ರದಾನ ಮಾಡಲಿರುವರು.
ಕಾರ್ಯಕ್ರಮವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಉದ್ಘಾಟಿಸಲಿದ್ದು ಎನ್ ಆರ್ ದಾಮೋದರ ಶರ್ಮಾ ಶುಭಾಶಂಸನೆಗೈಯಲಿರುವರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯತೀಶ್ ಶೆಟ್ಟಿ ನಲ್ಲೂರು, ಸಂತೋಷ್ ನಂದಳಿಕೆ, ಶ್ರೇಯಾಂಕ ಆರ್. ಶೆಟ್ಟಿ, ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ನಾಗೇಶ್ ನಲ್ಲೂರು ಉಪಸ್ಥಿತರಿದ್ದರು.






