ಬೆಳ್ವೆ | ಎನ್ಎನ್ಓ ವತಿಯಿಂದ ಸಾಧಕರಿಗೆ ಸನ್ಮಾನ

ಹೆಬ್ರಿ, ನ.30: ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕದ ವತಿಯಿಂದ ಸನ್ಮಾನ ಸಮಾರಂಭ ಬೆಳ್ವೆ ಶ್ರೀಸಂದೇಶ್ ಕಿಣಿ ಮೆಮೋರಿಯಲ್ ಸಬಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಅಧ್ಯಕ್ಷ ಮುಹಮ್ಮದ್ ರಫೀಕ್ ಅಜೆಕಾರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ ಮುಖ್ಯ ಶಿಕ್ಷಕ ವೈ.ಪಟ್ಟಾಬಿರಾಮ್ ಭಟ್ ಬೆಳ್ವೆ, ಸಾಹಿತಿ ಮುಸ್ತಾಕ್ ಹೆನ್ನಾಬೈಲ್, ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿಯ ಕೋಶಾಧಿಕಾರಿ ಫೀರ್ ಸಾಹೇಬ್, ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಉಪಾಧ್ಯಕ್ಷ ಮುನಾವರ್ ಅಜೆಕಾರು ಉಪಸ್ಥಿತರಿದ್ದರು.
2025-26ನೇ ಸಾಲಿನ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಮರೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಿ, ದಕ್ಷಿಣ ಭಾರತ ಕರಾಟೆ ಚಾಂಪಿಯನ್ ವಿಜೇತ ವಿದ್ಯಾರ್ಥಿ ಅಬ್ದುಲ್ ಮಲಿಕ್, 2024-25ನೇ ಸಾಲಿನ ಸಿಎ ಪರೀಕ್ಷೆಯಲ್ಲಿ ಉತೀರ್ಣಗೊಂಡ ವಿದ್ಯಾರ್ಥಿಗಳಾದ ಶೇಖ್ ಅಬ್ದುಲ್ ಝಾಹಿದ್ ಹಾಗೂ ಶಾಹುಲ್ ಹಮೀದ್ ಅಜೆಕಾರು ಅವರನ್ನು ಸನ್ಮಾನಿಸಲಾಯಿತು.
ನಮ್ಮ ನಾಡ ಒಕ್ಕೂಟದ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಹೆಬ್ರಿ ಘಟಕದ ಉಪಾಧ್ಯಕ್ಷ ಸಮದ್ ಹೈಕಾಡಿ, ಅನ್ಸಾರ್ ಹೊಸಂಗಡಿ, ಜಿಲ್ಲಾ ಸಮಿತಿ ಸದಸ್ಯ ಹರೂನ್ ರಶೀದ್ ಸಾಸ್ತಾನ, ಶಾಕಿರ್ ಹಾವಂಜೆ, ಕುಂದಾಪುರ ತಾಲೂಕು ಅಧ್ಯಕ್ಷ ಜಮಾಲ್ ಗುಲ್ವಾಡಿ, ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಶರೀಫ್ ಸಾಹೇಬ್ ಬೆಳ್ವೆ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕೂರು ಬೆಳ್ವೆ ಸಹಕರಿಸಿದರು. ಮುಹಮ್ಮದ್ ರಬಿ ಕಿರಾತ್ ಪಠಿಸಿದರು. ರಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು. ಅರಾಫತ್ ಸ್ವಾಗತಿಸಿ, ವಂದಿಸಿದರು. ಬೆಳ್ವೆ ಮಸೀದಿಯ ಖತೀಬ್ ಮೌಲಾನಾ ಮುಹಮ್ಮದ್ ರಫೀಕ್ ಬೆಳ್ವೆ ದುವಾ ನೆರವೇರಿಸಿದರು.







