ಭೀಮಾ ಕೋರೇಗಾಂವ್ ವಿಜಯೋತ್ಸವ: ಉಡುಪಿಯಲ್ಲಿ ಜ.1ರಂದು ಪಂಜಿನ ಮೆರವಣಿಗೆ

ಉಡುಪಿ, ಡಿ.30: ದಲಿತರ ಸ್ವಾಭಿಮಾನದ ಪ್ರತೀಕ, ದಲಿತರ ಅಸ್ಮಿತೆಯ ಸಂಕೇತವಾಗಿರುವ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ಜ.1ರಂದು ಸಂಜೆ 6ಗಂಟೆಗೆ ಉಡುಪಿಯಲ್ಲಿ ಆಚರಿಸಲಾಗುವುದು.
ಉಡುಪಿಯ ಕೆಥೋಲಿಕ್ ಸೆಂಟರ್‌ನಿಂದ ಸರ್ವಿಸ್ ಬಸ್ ನಿಲ್ದಾಣದ ವರೆಗೆ ಪಂಜಿನ ಮೆರವಣಿಗೆ ನಡೆಸಿ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಆಚರಿಸಲಾಗುವುದು. ಎಲ್ಲಾ ಸ್ವಾಭಿಮಾನಿ ಚಳುವಳಿ ಗಾರರೂ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





