ಬೈಕ್ ಕಳವು ಪ್ರಕರಣ: ಆರೋಪಿ ಬಂಧನ

ಮಣಿಪಾಲ, ನ.18: ಮಣಿಪಾಲ ಆರ್ಎಸ್ಬಿ ಸಭಾಭವನ ಹತ್ತಿರ ಅ.20ರಂದು ನಡೆದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ನ.18ರಂದು ಮಣ್ಣಪಳ್ಳ ಕೆರೆ ರಸ್ತೆ ಬಳಿ ಬಂಧಿಸಿದ್ದಾರೆ.
ಬಂಧಿತನನ್ನು ಬೆಂಗಳೂರು ಮಾರೆನಾಹಳ್ಳಿ ನಿವಾಸಿ ಮನೀಶ್ ಎ. ಎಂದು ಗುರುತಿಸಲಾಗಿದೆ. ವಾಹನ ತಪಾಸಣೆ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಈತ ಬೈಕ್ ಕಳವು ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




