ಕಾಪು ಬೀಚ್ ನಲ್ಲಿ ಸಮುದ್ರಪಾಲಾಗಿದ್ದ ಮತ್ತೋರ್ವನ ಮೃತದೇಹ ಪತ್ತೆ

ಮಲ್ಲಿಕ್ ರಿಹಾನ್
ಕಾಪು : ಕಾಪು ಬೀಚ್ನಲ್ಲಿ ರವಿವಾರ ಸಮುದ್ರ ಪಾಲಾಗಿದ್ದ ಮತ್ತೋರ್ವನ ಮೃತದೇಹವೂ ಸೋಮವಾರ ಮಧ್ಯಾಹ್ನ ವೇಳೆ ಪತ್ತೆಯಾಗಿದೆ.
ಮೃತರನ್ನು ದಾವಣಗೆರೆಯ ಅಹಮ್ಮದಿ ನಗರದ ನಿವಾಸಿ ಜಿಯಾವುಲ್ಲಾ ಎಂಬವರ ಮಲ್ಲಿಕ್ ರಿಹಾನ್(15) ಎಂದು ಗುರುತಿಸಲಾಗಿದೆ. ಬೆಳಗ್ಗೆ ಶಿವಮೊಗ್ಗ ಜಿಲ್ಲೆಯ ಮಾವಿನಕೊಪ್ಪ ಹೊಸನಗರ ನಿವಾಸಿ ಅಲ್ತಾಫ್ ಎಂಬವರ ಮಗ ಸಮೀರ್(20) ಮೃತದೇಹ ಪತ್ತೆಯಾಗಿತ್ತು.
ದಾವಣಗೆರೆಯಿಂದ ಕಾಪು ಬೀಚಿಗೆ ವಿಹಾರಕ್ಕೆ ಬಂದಿದ್ದ 12 ಮಂದಿ ಪೈಕಿ ಐವರು ಯುವಕರು ಸಮುದ್ರಕ್ಕೆ ಇಳಿದು ಈಜುತ್ತಿದ್ದರು. ಇವರಲ್ಲಿ ಮೂವರು ಸಮುದ್ರ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಜೀವ ರಕ್ಷಕ ದಳದ ಸಿಬ್ಬಂದಿಗಳು ಮೂವರಲ್ಲಿ ಓರ್ವನನ್ನು ರಕ್ಷಿಸಿದರು.
ಉಳಿದ ಇಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ತಡರಾತ್ರಿಯವರೆಗೂ ಇವರಿಬ್ಬರಿಗಾಗಿ ಶೋಧ ಕಾರ್ಯ ನಡೆಸಲಾಗಿತ್ತು. ಇಂದು ಬೆಳಗ್ಗೆ ಸಮೀರ್ ಮತ್ತು ಮಧ್ಯಾಹ್ನ ವೇಳೆ ರಿಹಾನ್ ಮೃತದೇಹ ಮುಳುಗಿದ ಸ್ಥಳದ ಸಮೀಪವೇ ಪತ್ತೆಯಾಗಿದೆ.
Next Story




