ದೈವಸ್ಥಾನಕ್ಕೆ ನುಗ್ಗಿ ಸೊತ್ತು ಕಳವು

ಕೋಟ, ನ.18: ಕೆದೂರು ಗ್ರಾಮದ ಹೊಸಮಠ ಧರ್ಮಗೋಳಿ ಹಳೆಯಮ್ಮ ದೈವಸ್ಥಾನದ ಅಡುಗೆಕೋಣೆಗೆ ನುಗ್ಗಿದ ಕಳ್ಳರು, ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅ.18ರಿಂದ ನ.7ರ ಮಧ್ಯಾವಧಿಯಲ್ಲಿ ದೈವಸ್ಥಾನದ ಅಡುಗೆ ಕೋಣೆಯ ಬೀಗವನ್ನು ಒಡೆದು ಒಳ ಪ್ರವೇಶಿಸಿದ ಕಳ್ಳರು, ಅಡುಗೆ ಕೋಣೆಯಲ್ಲಿದ್ದ ದೊಡ್ಡ ತಾಮ್ರದ 6 ಜೋಡು ಕೊಳಗ(ಹಂಡೆ)ಗಳು ಮತ್ತು ಒಂದು ತಾಮ್ರದ ದೊಡ್ಡ ಬಾಣಲೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 99,000ರೂ. ಎಂದು ಅಂದಾಜಿಸಲಾ ಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




