ಕಾರು ಕಂಪೌಂಡ್ಗೆ ಢಿಕ್ಕಿ: ಓರ್ವ ಮೃತ್ಯು, ಮೂವರಿಗೆ ಗಾಯ

ಉಡುಪಿ, ನ.16: ಕಾರೊಂದು ಮನೆಯ ಕಂಪೌಂಡ್ಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.16ರಂದು ಬೆಳಗ್ಗೆ ಕುಮ್ರಗೋಡು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಶೇಖ್ ವಾಜಿದ್ ಮಿರ್ಜಾ(73) ಎಂದು ಗುರುತಿಸಲಾಗಿದೆ. ನಯಾಜ್ ಎಂಬವರು ಕಾರನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬಂದು, ಮನೆಯ ಕಂಪೌಂಡ್ಗೆ ಡಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶೇಖ್ ವಾಜಿದ್ ಮಿರ್ಜಾ ಮತ್ತು ತೌಫಿಕ್ ತೀವ್ರವಾಗಿ ಗಾಯಗೊಂಡು, ನಬಾನ್, ಚಾಲಕ ನಯಾಜ್ ಸಣ್ಣಪುಟ್ಟ ಗಾಯಗೊಂಡರು.
ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ವಾಜಿದ್ ಮಿರ್ಜಾ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




