ಇಸ್ಪೀಟು ಜುಗಾರಿ: ಏಳು ಮಂದಿ ವಶಕ್ಕೆ

ಶಂಕರನಾರಾಯಣ, ಆ.17: ಕೊಡ್ಲಾಡಿ ಗ್ರಾಮದ ಮಾರ್ಡಿ ಎಂಬಲ್ಲಿನ ಹಾಡಿಯಲ್ಲಿ ಆ.16ರಂದು ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮಾರ್ಡಿಯ ಅಶೋಕ್ ಬೋವಿ, ಭಾಸ್ಕರ್ ನಾಯ್ಕ(51), ಭಾಸ್ಕರ್ ಶೆಟ್ಟಿ (56) ಎಂಬವರನ್ನು ಶಂಕರನಾರಾಯಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಸಂತೋಷ ಹಾಗೂ ಆದಿತ್ಯ ಪುತ್ರನ್ ಎಂಬವರು ಓಡಿ ಪರಾರಿಯಾಗಿದ್ದಾರೆ. ಆರೋಪಿಗಳಿಂದ 1,390ರೂ. ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಮಾಸೆಬೈಲು: ಮಡಾಮಕ್ಕಿ ಗ್ರಾಮದ ಬಡಾಬೆಪ್ಡೆ ಎಂಬಲ್ಲಿ ಆ.16ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಕುಂಟಮ ಕ್ಕಿಯ ಕಿರಣ್(29), ಬಡಾಬೆಪ್ಡೆಯ ಚಂದ್ರ ಪೂಜಾರಿ(47), ನಾಡ್ಪಾಲುವಿನ ಸುದರ್ಶನ ಪೂಜಾರಿ(35), ಬೇಳಂಜೆಯ ರಾಘವೇಂದ್ರ(36) ಎಂಬವರನ್ನು ಅಮಾಸೆಬೈಲು ಪೊಲೀಸರು 4000ರೂ. ನಗದು ಸಹಿತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story




