ಹಿರಿಯಡ್ಕ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಹಿರಿಯಡ್ಕ, ನ.1: ಬದುಕಿನೊಂದಿಗೆ ಬೆರೆತ ಭಾಷೆಯನ್ನು ಜೀವನದುದ್ದಕ್ಕೂ ಕಾದುಕೊಳ್ಳಬೇಕಾದುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯವೂ ಹೌದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಹೆಚ್. ಹೇಳಿದ್ದಾರೆ.
ಹಿರಿಯಡಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಐಕ್ಯುಎಸಿ ಘಟಕ, ಕನ್ನಡ ವಿಭಾಗ ಮತ್ತು ರಾ.ಸೇ.ಯೋ. ಘಟಕಗಳ ಆಶ್ರಯದಲ್ಲಿ ಆಚರಿಸಲಾದ 71ನೇ ನಾಡಹಬ್ಬದ ಪ್ರಯುಕ್ತ ಕನ್ನಡ ತಾಯಿಗೆ ಮಾಲಾರ್ಪಣೆ ಮಾಡಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಧಾಕೃಷ್ಣ ನಾಯಕ್, ಆಶಾ ಹೆಚ್.ಬಿ., ವಿದ್ಯಾರ್ಥಿ ನಾಯಕಿ ದೀಕ್ಷಾ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಪಂಜು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಅಕಾಡೆಮಿಯ ಉಡುಪಿ ಜಿಲ್ಲಾ ಚಕೋರ ಸಂಚಾಲಕಿ ಶಾಲಿನಿ ಯು.ಬಿ. ವಂದಿಸಿದರು.
Next Story




