ಕೋಳಿ ಅಂಕ: ಐವರ ಬಂಧನ

ಕುಂದಾಪುರ: ಸರಕಾರಿ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ಆಡುತ್ತಿದ್ದ ಐವರನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದಲ್ಲಿ ಜು.12 ರಂದು ನಡೆದಿದೆ.
ತಲ್ಲೂರಿನ ಮಂಜುನಾಥ(45), ಮಣೂರಿನ ಸುಕ್ಷಯ್ (29), ಬೇಳೂರಿನ ಶರಣ (27), ಕೊರ್ಗಿಯ ರಮೇಶ (32), ಕೆದೂರಿನ ರಜತ (27) ಬಂಧಿತರು. ಇವರಿಂದ ಜುಗಾರಿಗೆ ಬಳಸಿದ ಪರಿಕರಗಳು, ನಗದು, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




