ಕೋಳಿ ಅಂಕ: ಪ್ರಕರಣ ದಾಖಲು

ಕಾರ್ಕಳ, ಜು.18: ಕೋಳಿ ಅಂಕ ಜುಗಾರಿಗೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆ ಪೊಲೀಸರು ದಾಳಿ ನಡೆಸಿದ ಘಟನೆ ತಾಲೂಕಿನ ಸಾಣೂರು ಗ್ರಾಮದ ಪೊರ್ಲೊಟ್ಟುಗುತ್ತು ಎಂಬಲ್ಲಿ ನಡೆದಿದೆ.
ರಕ್ಷಿತ್ ಶೆಟ್ಟಿ, ಪ್ರವೀಣ ದೇವಾಡಿಗ ಹಾಗೂ ಇತರರು ಜೂಜಾಟ ಆಡುತ್ತಿದ್ದ ಬಗ್ಗೆ ಪಿಎಸ್‌ಐ ಶಿವಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಜೂಜಾಟಕ್ಕೆ ಉಪಯೋಗಿಸಿದ 12 ಸಾವಿರ ಮೌಲ್ಯದ 5 ಕೋಳಿ, 4,350 ರೂ. ನಗದು ಹಾಗೂ ಇತರ ಪರಿಕರ ವಶಕ್ಕೆ ಪಡೆದಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




