Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಎಸ್‌ಐಆರ್ ಕುರಿತ ಮುಖ್ಯಮಂತ್ರಿ ಹೇಳಿಕೆ:...

ಎಸ್‌ಐಆರ್ ಕುರಿತ ಮುಖ್ಯಮಂತ್ರಿ ಹೇಳಿಕೆ: ಉಡುಪಿ ಜಿಲ್ಲಾ ಸಹಬಾಳ್ವೆ ತೀವ್ರ ಆತಂಕ

ವಾರ್ತಾಭಾರತಿವಾರ್ತಾಭಾರತಿ21 Jan 2026 7:43 PM IST
share
ಎಸ್‌ಐಆರ್ ಕುರಿತ ಮುಖ್ಯಮಂತ್ರಿ ಹೇಳಿಕೆ: ಉಡುಪಿ ಜಿಲ್ಲಾ ಸಹಬಾಳ್ವೆ ತೀವ್ರ ಆತಂಕ

ಉಡುಪಿ, ಜ.21: ಕೇಂದ್ರ ಸರಕಾರ ಭಾರತದ ಚುನಾವಣಾ ಆಯೋಗದ ಮೂಲಕ ಕರ್ನಾಟಕದಲ್ಲಿ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ‘ಎಸ್‌ಐಆರ್’ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ನಂದಗಾವಿನಲ್ಲಿ ಸೋಮವಾರ ನೀಡಿದ ಹೇಳಿಕೆಯ ಕುರಿತಂತೆ ಉಡುಪಿ ಜಿಲ್ಲಾ ‘ಸಹಬಾಳ್ವೆ’ ಸಂಘಟನೆ ತೀವ್ರ ಆತಂಕ ಹಾಗೂ ಕಳವಳವನ್ನು ವ್ಯಕ್ತಪಡಿಸಿದೆ.

‘ಕಾಂಗ್ರೆಸ್‌ಎಸ್‌ಐಆರ್‌ನ್ನು ರಾಜಕೀಯ ವಿಷಯವಾಗಿ ಪರಿಗಣಿಸುವುದಿಲ್ಲ. ಎಸ್‌ಐಆರ್‌ನ್ನು ರಾಜಕೀಯಗೊಳಿಸು ವುದಿಲ್ಲ. ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವ ಕಡೆಗೆ ನಮ್ಮ ಗಮನ ವಿದೆ.’ ಎಂದು ಸಿದ್ಧರಾಮಯ್ಯ ಜ.19ರಂದು ನಂದಗಾವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು.

ಮುಖ್ಯಮಂತ್ರಿಯವರ ಪ್ರಸ್ತುತ ಹೇಳಿಕೆಯಿಂದ ನಾವು ಖಂಡಿತವಾಗಿ ಆತಂಕಿತರಾಗಿದ್ದೇವೆ. ನಮ್ಮ ಆತಂಕವು ಸಕಾರಣವಾಗಿದೆ. ಆದಕ್ಕೆ ಕಾರಣಗಳು ಸ್ಪಷ್ಟವಾಗಿವೆ ಎಂದು ಸಹಬಾಳ್ವೆಯ ಸಂಚಾಲಕ ಸಮಿತಿಯ ಪರವಾಗಿ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

1.ಭಾರತದ ಸಂವಿಧಾನವು ಚುನಾವಣಾ ಆಯೋಗಕ್ಕೆ ಕಾಲ ಕಾಲಕ್ಕೆ ತೀವ್ರ ಪರಿಶೀಲನೆ (ಐಆರ್) ಮಾಡುವ ಅಧಿಕಾರವನ್ನು ಕೊಟ್ಟಿದೆಯೇ ವಿನಹ, ಪ್ರಜೆಗಳ ನಾಗರಿಕತೆಯನ್ನು ಪರೀಶೀಲಿಸುವ ನಿರಂಕುಶ ಅಧಿಕಾರವಾದ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಅಧಿಕಾರ ನೀಡಿಲ್ಲ. ಆದ್ದರಿಂದ ಚುನಾವಣಾ ಆಯೋಗದ ಈ ಕ್ರಮವೇ ಸಂವಿಧಾನಬಾಹಿರವಾದದ್ದು.

ಇದನ್ನು ಒಕ್ಕೂಟ ಸರಕಾರವು ಸಂವಿಧಾನ ವಿರೋಧಿ ಎನ್‌ಆರ್‌ಸಿಗೆ ಕೈ ಹಾಕಿ, ನಾಗರಿಕರ ಪ್ರತಿಭಟನೆಗೆ ಮಣಿದು ಹಿಂತೆಗೆದುಕೊಂಡದ್ದಕ್ಕೆ ಪ್ರತಿಕಾರ ವಾಗಿ ಎನ್‌ಆರ್‌ಸಿಯನ್ನು ಎಸ್‌ಐಆರ್ ರೂಪದಲ್ಲಿ ದೇಶಾದ್ಯಂತ ಹರಿಬಿಟ್ಟಿದೆ. ಇದು ಸ್ಪಷ್ಟವಾಗಿ ಸಂವಿಧಾನವನ್ನು ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ಬುಡಮೇಲು ಮಾಡುವ ರಾಜಕೀಯ ತಂತ್ರವಾಗಿದೆ.

ಇದನ್ನರಿತು ಕೇರಳ, ತಮಿಳುನಾಡು ಹಾಗು ಪಶ್ಚಿಮ ಬಂಗಾಳದ ಸರಕಾರಗಳು ಎಸ್‌ಐಆರ್‌ನ್ನು ಸರ್ವಾಧಿಕಾರಿ ರಾಜಕೀಯ ತಂತ್ರವೆಂದು ಪರಿಗಣಿಸಿ ಎದುರಿಸುವ ಇಚ್ಛಾಶಕ್ತಿಯನ್ನು ತೋರುತ್ತಿವೆ. ಇಂಥಾ ವಿಷಮ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಮತದಾರರ ನಕ್ಷೆ ತಯಾರಿಯು ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸರಕಾರವೇ ಆಡಳಿತದಲ್ಲಿದ್ದು, ಪಕ್ಷವು ಇಡೀ ನಡಾವಳಿ ಗಳನ್ನು ‘ರಾಜಕೀಯವಾಗಿ ಕಾಣುವುದಿಲ್ಲ’ ಎಂಬ ಸೂಚನೆಯನ್ನು ಮುಖ್ಯಮಂತ್ರಿಗಳು ನೀಡುವುದು ಕೋಟ್ಯಾಂತರ ಜನರ ಸಂವಿಧಾನಿಕ ಪ್ರಜಾ ಹಕ್ಕನ್ನು ಕಿತ್ತುಕೊಳ್ಳುವ ತಂತ್ರವನ್ನು ಹಗುರವಾಗಿ ಅವರು ಕಾಣುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಷಯವಾಗಿದೆ.

2.ಇಲ್ಲಿಯವರೆಗೆ ಎಸ್‌ಐಆರ್ ನಡೆದಿರುವ ರಾಜ್ಯಗಳಲ್ಲಿ, ನಿಯಮಾನುಸಾರ ಪರಿಷ್ಕರಣೆಯ ನಂತರವೂ ಕೋಟ್ಯಾಂತರ ಪ್ರಜೆಗಳ ಹಕ್ಕನ್ನು ಅಸಾಂವಿಧಾನಿಕ ಕುಂಟು ನೆಪಗಳ ಮೂಲಕ ಕಸಿಯುವ ತಂತ್ರಗಳನ್ನು ಮಾಡಲಾಗುತ್ತಿದೆ. ಪಶ್ಚಿಮಬಂಗಾಳದಲ್ಲಿ 1.30 ಕೋಟಿ ಪ್ರಜೆಗಳು ಎಸ್‌ಐಆರ್‌ನ ಎಲ್ಲ ಅಗತ್ಯಗಳನ್ನು ಪೂರೈಸಿದಾಗಲೂ, ‘ತಾರ್ಕಿಕ ಪರೀಕ್ಷೆ’ ಎಂಬ ಭಯಾನಕ ನಡಾವಳಿಗಳನ್ನು ಮುಂದಿಟ್ಟು ಹಿಂಸಿಸಲಾಗುತ್ತಿದೆ!.

ಈ ಸಂಗತಿಯು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತರಲಾಗಿ, ನ್ಯಾಯಮೂರ್ತಿಗಳೂ ನಡಾವಳಿಗಳ ಕುರಿತು ದಿಗ್ಬ್ರಮೆ ವ್ಯಕ್ತಪಡಿಸಿ ಮಧ್ಯ ಪ್ರವೇಶಿಸಿದ್ದಾರೆ. ಇವುಗಳ ಪರಿವೇ ಇಲ್ಲದಂತೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹೇಳಿಕೆ ನೀಡುವುದು, ರಾಜ್ಯದ ಪ್ರಜೆಗಳ ಪ್ರಜಾ ಹಕ್ಕನ್ನು ಕಸಿಯುವ ಮತ್ತಷ್ಟೂ ಭಯಾನಕ ಆಯುಧಗಳು ಬರಲಿವೆಯೇ? ಎಂಬ ಆತಂಕ ಮೂಡುತ್ತಿದೆ.

ಈ ಹಿನ್ನೆಲೆಯಲ್ಲಿ, ಜಾತಿ ಮತ ಲಿಂಗಾತೀತವಾಗಿ ಸರ್ವ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಮೂಲಕ ಶಾಂತ ಸೌಹಾರ್ದ ಸಮಾಜ ನಿರ್ಮಾಣದ ಧ್ಯೇಯೋದ್ದೇಶ ಹೊಂದಿರುವ ಸಹಬಾಳ್ವೆ ವೇದಿಕೆಯು ಮುಖ್ಯಮಂತ್ರಿ ಗಳ ಈ ಹೇಳಿಕೆಯನ್ನು ಪ್ರಶ್ನಿಸುತ್ತದೆ. ಹಾಗೂ ಕರ್ನಾಟಕ ಸರಕಾರ ಮತ್ತು ಕಾಂಗ್ರೆಸ್ ಪಕ್ಷವೂ ಎಸ್‌ಐಆರ್‌ನ್ನು ಸಂವಿಧಾನ ವಿರೋಧಿ ಕ್ರೂರ ರಾಜಕೀಯವೆಂದೇ ಪರಿಗಣಿಸಿ ಎದುರಿಸಲು ಮುಂದಾಗಬೇಕು ಎಂದು ಸಹಬಾಳ್ವೆಯ ಸಂಚಾಲಕ ಸಮಿತಿ ಆಗ್ರಹಿಸಿದೆ.

Tags

Chief MinisterstatementSIRUdupi
share
ವಾರ್ತಾಭಾರತಿ
ವಾರ್ತಾಭಾರತಿ
Next Story
X