ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಯ ಎಸ್ಸೈ ವೈಲೆಟ್ ಫೆಮಿನಾಗೆ ರಾಷ್ಟ್ರಪತಿ ಪದಕ

ಉಡುಪಿ, ಜ.25: ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಯ ಉಪನಿರೀಕ್ಷಕಿ ವೈಲೆಟ್ ಫೆಮಿನಾ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಅವರು ಕರ್ನಾಟಕ ರಾಜ್ಯ ಸರಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನೇಮಕ ಮಾಡಿರುವ ಎಸ್‌ಐಟಿ ತಂಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್‌ಐಟಿ ತಂಡದಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದರು.
1994ರಲ್ಲಿ ಪೊಲೀಸ್ ಇಲಾಖೆ ಸೆರ್ಪಡೆಗೊಂಡ ಇವರು, 2018ನೆ ಎಸ್ಸೈ ಆಗಿ ಭಡ್ತಿ ಹೊಂದಿದರು. ಇವರು ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರ, ಮಣಿಪಾಲ ಹಾಗೂ ಹೊನ್ನಾವರ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ದ್ದಾರೆ. ಇವರು 2012ರಲ್ಲಿ ಮುಖ್ಯಮಂತ್ರಿ ಪದಕ ಹಾಗೂ 2025ರಲ್ಲಿ ಡಿಜಿ- ಐಜಿಪಿ ಪ್ರಶಂಸನಾ ಪದಕಕ್ಕೆ ಭಾಜನ ಆಗಿದ್ದರು.
Next Story





