ಕಂಟೈನರ್ - ಬೈಕ್ ಢಿಕ್ಕಿ: ಸವಾರ ಮೃತ್ಯು

ಗಂಗೊಳ್ಳಿ, ಫೆ.18: ಇಲ್ಲಿನ ಮರವಂತೆ ಯೂ ಟರ್ನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫೆ.17ರಂದು ಬೆಳಗ್ಗೆ ಬೈಕೊಂದು ಕಂಟೈನರ್ ಲಾರಿಯ ಚಕ್ರದಡಿಗೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಜೈರಾಮ ಬೈರು ಕಾತ್ರೋಟ ಎಂದು ಗುರುತಿಸಲಾಗಿದೆ. ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿಯ ಹಿಂದುಗಡೆಯಿಂದ ಬಂದ ಬೈಕ್, ಲಾರಿಯನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕ್, ಲಾರಿಯ ಹಿಂದಿನ ಟಯರ್‌ಗೆ ತಾಗಿತ್ತೆನ್ನಲಾಗಿದೆ. ಇದರಿಂದ ಬೈಕ್ ರಸ್ತೆಗೆ ಬಿದ್ದು, ಸವಾರ ಲಾರಿಯ ಹಿಂಬದಿಯ ಚಕ್ರದಡಿ ಸಿಲುಕಿ ಕೊಂಡರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




