ಪಂಚಗಂಗಾವಳಿ ಎಕ್ಸಪ್ರೆಸ್‌ಗೆ ಕುಣಿಗಲ್‌ನಲ್ಲಿ ನಿಲುಗಡೆ ಮುಂದುವರಿಕೆ

ಉಡುಪಿ, ಅ.5:ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಹಾಗೂ ಕಾರವಾರ ನಡುವೆ ಪ್ರತಿದಿನ ಸಂಚರಿ ಸುವ ಪಂಚಗಂಗಾವಳಿ ಎಕ್ಸ್‌ಪ್ರೆಸ್ ರೈಲಿಗೆ ಕುಣಿಗಲ್ ನಿಲ್ದಾಣದಲ್ಲಿ ನಿಲುಗಡೆಯನ್ನು ತಾತ್ಕಾಲಿಕವಾಗಿ ಇನ್ನೂ ಮೂರು ತಿಂಗಳು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಈ ರೈಲಿಗೆ ಅ.6ರಿಂದ 2024ರ ಜನವರಿ 5ರವರೆಗೆ ನಿಲುಗಡೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಿಂದ ಬರುವ ರೈಲು ಪ್ರತಿದಿನ ಸಂಜೆ 7:42ಕ್ಕೆ ಕುಣಿಗಲ್ ತಲುಪಿ 7:43ಕ್ಕೆ ನಿರ್ಗಮಿಸಲಿದೆ. ಅದೇ ರೀತಿ ಕಾರವಾರದಿಂದ ಬರುವ ರೈಲು ಬೆಳಗಿನ ಜಾವ 5:09ಕ್ಕೆ ನಿಲ್ದಾಣ ತಲುಪಿ 5:10ಕ್ಕೆ ನಿರ್ಗಮಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story





