Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ‘ಯಕ್ಷಚಂದ್ರ’ ಕೃತಿಯಲ್ಲಿ ಹಿರಿಯ...

‘ಯಕ್ಷಚಂದ್ರ’ ಕೃತಿಯಲ್ಲಿ ಹಿರಿಯ ಕಲಾವಿದರಿಗೆ ಅವಹೇಳನ ವಿವಾದ: ಕ್ಷಮೆಯಾಚಿಸಿ, ಕೃತಿ ಹಿಂದೆಗೆದುಕೊಂಡ ಯಕ್ಷ ಕಲಾವಿದ ಕೊಂಡದಕುಳಿ

ವಾರ್ತಾಭಾರತಿವಾರ್ತಾಭಾರತಿ17 Oct 2025 7:31 PM IST
share
‘ಯಕ್ಷಚಂದ್ರ’ ಕೃತಿಯಲ್ಲಿ ಹಿರಿಯ ಕಲಾವಿದರಿಗೆ ಅವಹೇಳನ ವಿವಾದ: ಕ್ಷಮೆಯಾಚಿಸಿ, ಕೃತಿ ಹಿಂದೆಗೆದುಕೊಂಡ ಯಕ್ಷ ಕಲಾವಿದ ಕೊಂಡದಕುಳಿ

ಉಡುಪಿ, ಅ.17: ಇತ್ತೀಚಿಗಷ್ಟೇ ಬಿಡುಗಡೆಗೊಂಡ ತನ್ನ ಯಕ್ಷಾನುಭವದ ಕೃತಿ ‘ಯಕ್ಷಚಂದ್ರ’ದಲ್ಲಿ ಯಕ್ಷಗಾನದ ಖ್ಯಾತ ಹಾಗೂ ಹಿರಿಯ ಕಲಾವಿದರ ಬಗ್ಗೆ ಅವಹೇಳನಕಾರಿ ಹಾಗೂ ಅಸತ್ಯದ ಹೇಳಿಕೆಗಳನ್ನು ಬರೆದಿರುವ ಆರೋಪ ದೊಡ್ಡ ವಿವಾದವನ್ನೇ ಸೃಷ್ಟಿಸಿದ ಹಿನ್ನೆಲೆಯಲ್ಲಿ ಬಡಗುತಿಟ್ಟಿನ ಖ್ಯಾತ ಯಕ್ಷಗಾನ ವೇಷಧಾರಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಎಲ್ಲಾ ಕಲಾವಿದರ ಕ್ಷಮೆ ಯಾಚಿಸಿದ್ದಾರಲ್ಲದೇ, ಬಿಡುಗಡೆಗೊಂಡ ಪುಸ್ತಕದ ಮಾರಾಟ ವನ್ನು ನಿಲ್ಲಿಸಿ ಕೃತಿಯನ್ನು ಹಿಂದೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಅಧಿಕೃತ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

ಯಕ್ಷಗಾನ ಕ್ಷೇತ್ರದ ಮೇರು ಕಲಾವಿದರೆಂದೇ ಗುರುತಿಸಿಕೊಂಡಿರುವ ದಿ.ಕೆರೆಮನೆ ಶಂಭು ಹೆಗಡೆ, ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ, ದಿ.ಜಲವಳ್ಳಿ ವೆಂಕಟೇಶ್ ರಾವ್, ಸ್ತ್ರೀವೇಷ ಕಲಾವಿದ ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಸೇರಿದಂತೆ ಹಲವು ಸಮಕಾಲೀನ ಕಲಾವಿದರ ಕುರಿತು ಕೃತಿಯಲ್ಲಿ ಅಸಭ್ಯ ಹಾಗೂ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಕಲಾವಿದರ ಕುಟುಂಬಿಕರು ಹಾಗೂ ಈಗಿನ ಹಲವು ಕಲಾವಿದರು (ವಿಶೇಷತ: ಉತ್ತರ ಕನ್ನಡದ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಕ್ಷಮೆ ಯಾಚಿಸಿ, ಕೃತಿಯನ್ನು ಹಿಂದಕ್ಕೆ ಪಡೆಯಬೇಕೆಂದು, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಎಲ್ಲಾ ಯಕ್ಷಗಾನ ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ವಿನಮ್ರ ನಿವೇದನೆ ಎಂಬ ಸುದೀರ್ಘ ಹೇಳಿಕೆ ಯೊಂದನ್ನು ಇಂದು ಬಿಡುಗಡೆಗೊಳಿಸಿದ ಕೊಂಡದಕುಳಿ,‘ಯಕ್ಷಚಂದ್ರ’ ವಿವಾದದ ಕುರಿತಂತೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಇತ್ತೀಚಿಗೆ ಪ್ರಕಟವಾಗಿರುವ ನನ್ನ ಯಕ್ಷಾನುಭವ ಕಥನ ‘ಯಕ್ಷಚಂದ್ರ’ (ನಿರೂಪಣೆ: ರಾಘವೇಂದ್ರ ಭಟ್, ಪ್ರಕಾಶಕರು: ಕೊಂಡದಕುಳಿ ಬಳಗ ಬೆಂಗಳೂರು)ದ ಬಗ್ಗೆ ಆಕ್ಷೇಪ, ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ತಾನು ಈ ಪ್ರಕಟಣೆಯಲ್ಲಿ ನೀಡುತ್ತಿರುವುದಾಗಿ ವಿವರಿಸಿದ್ದಾರೆ.

ಹೇಳಿಕೆ ವಿವರ: ನನ್ನ ಜೀವನ ಅನುಭವವನ್ನು ಪ್ರಸ್ತುತಗೊಳಿಸಿದ ‘ಯಕ್ಷಚಂದ್ರ’ ಪುಸ್ತಕ ಬಿಡುಗಡೆಗೊಂಡ ನಂತರ ಯಕ್ಷಗಾನ ವಲಯದಲ್ಲಿ ತುಂಬಾ ಅಸಹನೆ, ಗೊಂದಲಗಳು ಸೃಷ್ಟಿಯಾಗಿದ್ದು ತಿಳಿದುಬಂತು. ಹಾಗೆಯೇ ನನ್ನ ಯಕ್ಷಗಾನದ ಸಹಕಲಾವಿದರು ಇದರಿಂದ ನೊಂದರು ಎನ್ನುವ ವಿಷಯ ನನ್ನ ಗಮನಕ್ಕೆ ಬಂತು. ಹಾಗಾಗಿ ನಾನು ಸ್ವಯಂಸ್ಪೂರ್ತಿಯಿಂದ ಹೀಗೊಂದು ಸ್ಪಷ್ಟಿಕರಣವನ್ನು ನೀಡಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

*ಸಂದರ್ಶನ ರೂಪದಲ್ಲಿ ನಾನು ನೀಡಿದ ವಿಚಾರಗಳು ನಾನು ಯಾವ ಭಾವದಲ್ಲಿ ಹೇಳಿದ್ದೇನೋ, ಅದಕ್ಕಿಂತ ವಿಪರೀತಾರ್ಥದಲ್ಲಿ ಸಮಾಜದಲ್ಲಿ ಕಾಣುವಂತಾದುದಕ್ಕೆ ನಾನು ಪ್ರಾಮಾಣಿಕವಾಗಿ ವಿಷಾದಿಸುತ್ತೇನೆ. ಈ ಬೆಳವಣಿಗೆ ನನಗೂ ನೋವು ತಂದಿದೆ.

*ಪ್ರತಿಯೊಬ್ಬರ ಆಲೋಚನೆ, ಅವಗಾಹನೆ ಎಲ್ಲವೂ ಭಿನ್ನ. ಅಕ್ಷರಗಳು ಕೆಲವೊಮ್ಮೆ ಬರಹಗಾರನ ಭಾವಕ್ಕೂ ಓದುಗನ ಭಾವಕ್ಕೂ ವ್ಯತ್ಯಾಸವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಮನದಲ್ಲಿಲ್ಲದ ವ್ಯತಿರಿಕ್ತತೆ, ಅಕ್ಷರಗಳಲ್ಲಿ ಬಿಂಬಿತವಾಗಿ, ಅಪಾರ್ಥಕ್ಕೆ ಎಡೆಮಾಡುತ್ತದೆ ಎನ್ನುವುದು ನನ್ನ ಕಲ್ಪನೆಯಲ್ಲಿರಲಿಲ್ಲ.

*ಹಿರಿಯರನ್ನು ತೇಜೋವಧೆ ಮಾಡುವ ಉದ್ದೇಶ ಇದ್ದಿದ್ದೇ ಆದಲ್ಲಿ ಅವರನ್ನು ಮನಸಾ ಹೊಗಳುವ ಪ್ರಶ್ನೆಯೇ ಬರುತ್ತಿರಲಿಲ್ಲ! ಆದರೆ ಈ ಅಪಾರ್ಥಗಳ ನಡುವೆ, ಅವರ ಔನ್ನತ್ಯದ ಕುರಿತಾಗಿ ಉಲ್ಲೇಖಿಸಿದ ಪದಪುಂಜ ಗಳು ಹಾಗೂ ನಾನು ಅವರ ಕುರಿತಾಗಿ ವ್ಯಕ್ತಪಡಿಸಿದ ಗೌರವಭಾವ ಮಾಸಿ ಹೋಯಿತಲ್ಲ ಎಂಬ ಬಗ್ಗೆ ಖೇದವಾಗಿದೆ.

*ಕೆಲಕಲಾವಿದರೊಂದಿಗೆ ನಡೆದ ಘಟನೆಗಳನ್ನು ಪೂರ್ವಾಗ್ರಹ ರಹಿತನಾಗಿ ಹಂಚಿಕೊಂಡೆ. ಕೃಷಯಾಜಿ ಬಳ್ಕೂರು ನನ್ನ ಸಹೋದರನಂತೆ. ಸುಬ್ರಹ್ಮಣ್ಯ ಚಿಟ್ಟಾಣಿ, ಹಾರ್ಸಿಮನೆ ವೆಂಕಟಗಿರಿ, ಕೊಳಗಿ ಕೇಶವ ಹೆಗಡೆ, ಶಂಕರ ಭಾಗವತ ಯಲ್ಲಾಪುರ, ಮೂರೂರು ನಾಗೇಂದ್ರ ಭಟ್, ಕಲಗದ್ದೆ ವಿನಾಯಕ ಹೆಗಡೆ, ಇಟಗಿ ಮಹಾಬಲೇಶ್ವರ ಭಟ್ ಈ ಎಲ್ಲ ಪ್ರೀತಿ ಪಾತ್ರ ಕಲಾವಿದರಿಗೆ ನೋವಾಗಿದೆ ಎಂದು ತಿಳಿದು ನನಗೂ ನೋವಾಯಿತು. ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಜಲವಳ್ಳಿ ವಿದ್ಯಾಧರ ರಾವ್ ಇವರ ಕುರಿತು ವೈಯಕ್ತಿಕ ವಾಗಿ ನನಗೆ ಯಾವುದೇ ಅಸಂತೋಷವಿಲ್ಲವೆಂದು ಹೇಳಬಯಸುತ್ತೇನೆ. ಈ ಬಗ್ಗೆ ಖೇದ ವ್ಯಕ್ತಪಡಿಸುತ್ತೇನೆ.

*ಪುಸ್ತಕದಲ್ಲಿ ಪ್ರಸ್ತಾಪಿತವಾದ ವಿಷಯ ಕಲಿಕಾ ಕೇಂದ್ರಗಳಿಗೆ, ವಿಮರ್ಶಕ ರಿಗೆ ನೋವಾಗಿದ್ದಲ್ಲಿ ಕ್ಷಮೆಯಿರಲಿ.

*ಹಿರಿಯ ಚೇತನಗಳಾದ ಸಾರ್ವಕಾಲಿಕ ಶ್ರೇಷ್ಠ ಕಲಾವಿದರಾದ ಹಾಗೂ ನನ್ನ ಅತ್ಯಂತ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದ ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಇವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೋವಾಗಿದೆ ಎಂದು ತಿಳಿಯಿತು. ಈ ಹಿರಿಯ ಕಲಾವಿದರೊಂದಿಗೆ ನಡೆದ ಕೆಲವು ಘಟನೆಗಳನ್ನು ಹಂಚಿಕೊಂಡೆ ವಿನಹ, ಅದರಿಂದ ಅವರ ವ್ಯಕ್ತಿತ್ವಕ್ಕೆ ಅಪಚಾರ ಎಸಗುವ ಯಾವ ಉದ್ದೇಶವಾಗಲಿ, ಕಲ್ಪನೆಯಾಗಲಿ ನನ್ನಲ್ಲಿ ಎಂದಿಗೂ ಇರಲ್ಲಿಲ್ಲ. ಆದರೂ ಅಪಾರ್ಥಕ್ಕೆ ಎಡೆ ಆಗಿದೆ ಎಂದು ಅತ್ಯಂತ ಬೇಸರಿಸುತ್ತಾ ಅಂತಹ ಹಿರಿಯರೆದುರು ಕಿರಿಯನೇ ಆಗಿರಲು ಇಚ್ಛಿಸುತ್ತೇನೆ. ಸಂಬಂಧಪಟ್ಟವರು ನಿರ್ಮಲ ಮನದಿಂದ ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ.

*ವೃತ್ತಿಜೀವನದಲ್ಲಿ ಕೆಲವೊಮ್ಮೆ ನನ್ನ ಕಠಿನ ನಿರ್ಧಾರಗಳಿಂದಾಗಿ ಕೆಲವರಿಗೆ ಬೇಸರ ಉಂಟುಮಾಡಿರಬಹುದು. ಆದರೆ, ನಾನು ಮೇಳದ ಸಂಚಾಲಕರಿಗೆ, ಸಹಕಲಾವಿದರಿಗೆ, ಸಂಘಟಕರಿಗೆ, ಪ್ರೇಕ್ಷಕರಿಗೆ ಪ್ರಿಯ ಕಲಾವಿದನಾಗಿ ಉಳಿಯುವ ಬಗ್ಗೆಯೇ ಒಲವು ತೋರಿದ್ದೇನೆ. ಈಗ ನಾನೇ ಯಕ್ಷಗಾನ ಕ್ಷೇತ್ರದಲ್ಲಿ ವಿವಾದದ ಕೇಂದ್ರ ಬಿಂದುವಾದೆನಲ್ಲ ಎಂದು ವ್ಯಥಿತನಾಗಿದ್ದೇನೆ ಎಂದು ಕೊಂಡದಕುಳಿ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

‘ಯಕ್ಷಗಾನ ದೊಡ್ಡದು, ನಾನು ಸಣ್ಣವನು. ನಾನು ಹುಟ್ಟುವ ಮೊದಲೂ ಯಕ್ಷಗಾನವಿತ್ತು. ನಾನು ಅಳಿದ ಮೇಲೂ ಯಕ್ಷಗಾನವಿರುತ್ತದೆ. ಈ ವಿಷಯವನ್ನು ಇಲ್ಲಿಗೇ ಮುಕ್ತಾಯಗೊಳಿಸಿ ನಾವೆಲ್ಲ ಕಲಾವಿದರು ಈ ಮೊದಲಿನಂತೆ ಸೌಹಾರ್ದದಿಂದ ಯಕ್ಷಗಾನಕ್ಕಾಗಿ ಕಲೆಯ ಏಳಿಗೆಗಾಗಿ ಶ್ರಮಿಸೋಣ, ಕಲಾ ಬಂಧುಗಳಾಗಿ ಬಾಳೋಣ ಎಂದು ವಿನಂತಿಸುತ್ತೇನೆ. ಇನ್ನು ಮುಂದೆ ಈ ಪುಸ್ತಕ ಎಲ್ಲಿಯೂ ವಿತರಿಸದಂತೆ ಹಾಗೂ ಪುನಹ ಮುದ್ರಿಸದಂತೆ ಪ್ರಕಾಶಕರಲ್ಲಿ ವಿನಂತಿಸಿದ್ದೇನೆ. ಅವರು ಅದಕ್ಕೆ ಒಪ್ಪಿದ್ದಾರೆ.

-ಕೊಂಡದಕುಳಿ ರಾಮಚಂದ್ರ ಹೆಗಡೆ, ಹಿರಿಯ ಕಲಾವಿದ ಕುಂಭಾಶಿ.

ಕೊಂಡದಕುಳಿ ಸ್ಪಷ್ಟನೆ

*ಹಿರಿಯರ ತೇಜೋವಧೆಯ ಉದ್ದೇಶವಿಲ್ಲ.

*ವಿವಾದದಿಂದ ವ್ಯಥಿತನಾಗಿದ್ದೇನೆ, ನನಗೂ ಇದರಿಂದ ನೋವಾಗಿದೆ.

*ಹಿರಿಯರೆದುರು ಕಿರಿಯನೇ ಆಗಿದ್ದೇನೆ.

*ಎಲ್ಲಾ ಕಲಾವಿದರ ಕ್ಷಮೆ ಕೋರಿ, ಪುಸ್ತಕ ಹಿಂಪಡೆವ ಘೋಷಣೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X