ಸಹಕಾರ ಸಪ್ತಾಹ: ಸಹಕಾರ ಪ್ರಚಾರ ರಥಕ್ಕೆ ಚಾಲನೆ

ಉಡುಪಿ, ನ.15: ಉಡುಪಿ ರಾಜ್ಯ ಮಟ್ಟದ 70ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಮಂಗಳವಾರ ಉಡುಪಿ ಲಿಕೋ ಬ್ಯಾಂಕ್ ಆವರಣದಲ್ಲಿ ‘ಸಹಕಾರ ಪ್ರಚಾರ ರಥ’ಕ್ಕೆ ಸಹಕಾರಿ ಯೂನಿಯನ್ ನಿರ್ದೇಶಕ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಸಹಕಾರಿ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಮುಖ್ಯಅತಿಥಿಗಳಾಗಿ ಎಲ್‌ಐಸಿ ಎಂಪ್ಲಾಯಿಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ ಕೃಷ್ಣ, ಟೀಚರ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಕುಂದಾಪುರ, ಯೂನಿನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ, ಅಶೋಕ್ ಕುಮಾರ ಬಲ್ಲಾಳ, ವಿಶ್ವನಾಥ ಶೆಟ್ಟಿ, ದಯಾನಂದ, ಅಲೆವೂರು ಹರೀಶ್ ಕಿಣಿ, ಚಂದ್ರಹಾಸ್ ಶೆಟ್ಟಿ, ಶಂಕರ ಪೂಜಾರಿ, ಶಶಿಕಲಾ, ಮಂಜುನಾಥ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು, ಸಹಕಾರಿಗಳು ಉಪಸ್ಥಿತರಿದ್ದರು.
Next Story





