ಉಡುಪಿ ಜಿಲ್ಲಾ ಸರ್ಜನ್ ವರ್ಗಾವಣೆಗೆ ದಸಂಸ ಆಗ್ರಹ

ಉಡುಪಿ, ಆ.7: ವರ್ಗಾವಣೆ ಆದೇಶವಿದ್ದರೂ ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಎಚ್.ಎಸ್.ಅಶೋಕ್ ಅವರನ್ನು ವರ್ಗಾವಣೆ ಮಾಡದಿರುವ ಕ್ರಮದ ವಿರುದ್ಧ ಬುಧವಾರ ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ನಿಯೋಗ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮತ್ತು ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಮತ್ತು ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಅವರಿಗೆ ವಾಸ್ತವದ ಅರಿವು ಮೂಡಿಸಲಾಯಿತು.
ಜಿಲ್ಲಾಧಿಕಾರಿ ಭೇಟಿಯ ನಂತರ ಚರ್ಚಿಸಿದ ದಸಂಸ ನಿಯೋಗ ಕರ್ನಾಟಕ ಆಡಳಿತಾತ್ಮಕ ನ್ಯಾಯಲಯದ ಸ್ಪಷ್ಟ ಆದೇಶವಿರುವಾಗ ಇನ್ನು ಸಹ ವರ್ಗಾವಣೆ ಮಾಡದೇ ಇದ್ದರೆ ಉಸ್ತುವಾರಿ ಸಚಿವರು ಬಂದಾಗ ಕಪ್ಪುಬಾವುಟ ತೋರಿಸಿ ಘೇರಾವ್ ಹಾಕುವ ಕಾರ್ಯಕ್ರಮ ಹಾಕಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು.
ನಿಯೋಗದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಭಾಸ್ಕರ ಮಾಸ್ಟರ್ ಕುಂಜಿಬೆಟ್ಟು, ಅಣ್ಣಪ್ಪ ನಕ್ರೆ, ತಾಲೂಕು ಸಂಚಾಲಕರಾದ ಶಿವರಾಜ್ ಬೈಂದೂರು, ಕೆ.ಸಿ.ರಾಜು ಬೆಟ್ಟಿನಮನೆ, ಹರೀಶ್ಚಂದ್ರ ಬಿರ್ತಿ, ರಾಘವ ಕುಕುಜೆ, ರಾಜೇಂದ್ರ ಮಾಸ್ಟರ್ ಬೆಳ್ಳೆ, ಪದಾಧಿಕಾರಿಗಳಾದ ಕೀರ್ತಿ ಕುಮಾರ್ ಪಡುಬಿದ್ರಿ, ರಾಘವ ಕೋಟ್ಯಾನ್, ಶೇಖರ ಕೊಡಂಕೂರು, ಚಂದ್ರ ಕೊರ್ಗಿ, ಶಂಕರ ಕೊಡಂಕೂರು, ಕೃಷ್ಣ ಬೆಳ್ಳೆ, ಶ್ರೀಕಾಂತ್ ಹಿಜಾಣ, ಭಾಸ್ಕರ್ ಕುಂಟೋಳಿ ಉಪಸ್ಥಿತರಿದ್ದರು.







