ಶಂಕರನಾರಾಯಣ: ತಾಯಿ ಮರಣದ ಚಿಂತೆಯಲ್ಲಿ ಮಗಳು ಆತ್ಮಹತ್ಯೆ

ಶಂಕರನಾರಾಯಣ: ತಾಯಿ ಮರಣದ ವಿಚಾರದಲ್ಲಿ ಮನನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.14ರಂದು ಬೆಳಗ್ಗೆ ಅಲ್ಬಾಡಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಅಲ್ಬಾಡಿ ಗ್ರಾಮದ ಚಂದ್ರ ಎಂಬವರ ಪತ್ನಿ ರತ್ನಾ(38) ಎಂದು ಗುರುತಿಸಲಾಗಿದೆ. ಸುಮಾರು 3 ತಿಂಗಳುಗಳ ಹಿಂದೆ ರತ್ನಾ ಅವರ ತಾಯಿ ಮೃತಪಟ್ಟಿದ್ದು, ಇದೇ ಚಿಂತೆಯಲ್ಲಿ ರತ್ನಾ ಮಾನಸಿಕವಾಗಿ ನೊಂದುಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





